ನಾಯಕಿಗೆ ನಾಯಕನ ಮೇಲೇ ಯಾವುದೇ ಕಾರಣಕ್ಕೆ ಕೋಪ. ನಾಯಕ ಕಂಡ ಕೂಡಲೇ ಅವನೊಂದಿಗೆ ವಾಗ್ವಾದಕ್ಕಿಳಿಯುವ ನಾಯಕಿ ಪ್ರೇಮಕಲಹದಿಂದ ಹೊಡೆಯುವುದಕ್ಕೂ ಅಣಿಯಾಗುತ್ತಾಳೆ. ಉಗ್ರಳಾದ ನಾಯಕಿಯನ್ನು ಶಾಂತಗೊಳಿಸುವಲ್ಲಿ ನಾಯಕ ಸಫಲನಾಗುತ್ತಾನೆ.
ಈ ಭಾಗದ ಚಿತ್ರೀಕರಣ ನಡೆದಿದ್ದು ಎಫ್ಎಂ ರೇಡಿಯೋ ಚಿತ್ರಕ್ಕಾಗಿ ಬಿಜಾಪುರದ ಗೋಲಗುಮ್ಮಟದಲ್ಲಿ. ಚಿತ್ರದ ಪ್ರಮುಖ ಪಾತ್ರಧಾರಿಗಳಾಗಿ ಗೋಪಿಚಂದ್ ಮತ್ತು ರಿಶಿಕಾ ಸಿಂಗ್ ಅಭಿನಯಿಸಿದ್ದಾರೆ. ಇದಲ್ಲದೆ, ಬಿಜಾಪುರದ ಎಲ್ಬಿಎಸ್ ಮಾರುಕಟ್ಟೆಯಲ್ಲಿ ನಾಯಕ ಗೋಪಿಚಂದ್ ಹಾಗೂ ಸಾಹಸ ಕಲಾವಿದರ ನಡುವೆ ನಡೆಯುವ ಚೇಸಿಂಗ್ ಸನ್ನಿವೇಶವನ್ನು ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು ಅವರ ನೇತೃತ್ವದಲ್ಲಿ ಚಿತ್ರೀಕರಿಸಲಾಯಿತು.
ಚಿತ್ರಕ್ಕೆ ಜಿ.ಆರ್.ಶಂಕರ್ ಸಂಗೀತವಿದೆ. ಇವರ ಜೊತೆಗೆ ಪ್ರೇಕ್ಷಕರನ್ನು ನಗಿಸಲು ಸಾಧುಕೋಕಿಲಾ ಮತ್ತು ಟೆನ್ನಿಸ್ ಕೃಷ್ಣ ಅವರಿದ್ದಾರೆ. ವಿನಯಾಪ್ರಕಾಶ್, ಜೈಜಗದೀಶ್, ಸುಧಾಬೆಳವಾಡಿ ಚಿತ್ರದಲ್ಲಿದ್ದಾರೆ.