ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಕಾಮಿಡಿ ಕಿಂಗ್ ಜಗ್ಗೇಶ್‌ಗೂ ಹುಟ್ಟುಹಬ್ಬದ ಸಿಹಿ (Comedy | Mata | Eddelu Manjunatha | Jaggesh)
ಸುದ್ದಿ/ಗಾಸಿಪ್
Bookmark and Share Feedback Print
 
MOKSHA
ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟ ಜಗ್ಗೇಶ್ ಅವರಿಗೂ ಇಂದು(ಮಾ.17) ಹುಟ್ಟುಹಬ್ಬದ ಸಂಭ್ರಮ. ಅವರು ತಮ್ಮ ಮನೆಯಲ್ಲಿ ಅಭಿಮಾನಿಗಳೊಂದಿಗೆ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿದರು. ಈ ಸಂದರ್ಭ ಮಾತನಾಡಿದ ಅವರು, ಕರ್ನಾಟಕದ ಚಿತ್ರಪ್ರೇಮಿಗಳು ತಮ್ಮನ್ನು ಬೆಳೆಸಿದ್ದಕ್ಕೆ ಕೃತಜ್ಞತೆ ಅರ್ಪಿಸಿದರು. ತಾನೇ ಒಂದು ಕಾಮಿಡಿ ಚಿತ್ರ ಮಾಡಿ ಆ ಚಿತ್ರ ಬೆಳ್ಳಿಹಬ್ಬ ಆಚರಿಸಬೇಕೆಂದು ಕನಸಿದೆ, ಆ ಕನಸಿನ್ನೂ ಪೂರ್ಣಗೊಂಡಿಲ್ಲ ಎಂದರು ಜಗ್ಗೇಶ್.

ಆದರೆ ಜಗ್ಗೇಶ್ ಈ ಬಾರಿ ತಮ್ಮ ಮಗ ಗುರು ರಾಜ್ ಜೊತೆಗೆ ಕಾಣಿಸಿಕೊಳ್ಳುತ್ತಿದ್ದಾರೆ. ಹೊಸ ಚಿತ್ರವೊಂದಕ್ಕೆ ಕೈ ಹಾಕಿರುವ ಜಗ್ಗೇಶ್ ಅವರ ಜೊತೆ ಬಾರಿ ಮಗ ಗುರು ಕೂಡಾ ಕೂಡಿದ್ದಾರೆ. ವಿಶೇಷವೆಂದರೆ ಈ ಹೆಸರಿಡದ ಚಿತ್ರದಲ್ಲಿ ನಿಜ ಜೀವನದ ಅಪ್ಪ ಮಗ (ಜಗ್ಗೇಶ್- ಗುರುರಾಜ್) ಸಿನಿಮಾದಲ್ಲಿ ಮಾತ್ರ ಫ್ರೆಂಡ್ಸ್ ಅಂತೆ. ಇಬ್ಬರು ಗೆಳೆಯರ ಅವರದೇ ಹಾದಿಯ ಪ್ರೇಮ ಕಥಾನಕ ಕಾಮಿಡಿ ರೂಪದಲ್ಲಿ ಮೂಡಿಬರಲಿದೆ. ಈಗಾಗಲೇ ಸ್ಕ್ರಿಪ್ಟ್ ಕೆಲಸ ಶುರುವಾಗಿದ್ದು, ಇನ್ನೆರಡು ತಿಂಗಳಲ್ಲಿ ಚಿತ್ರ ಆರಂಭವಾಗಲಿದೆ ಎಂದರು ಜಗ್ಗೇಶ್.

ಇಂಥ ಜಗ್ಗೇಶ್ ಅರು ಕಾಮಿಡಿ ಚಿತ್ರಗಳಲ್ಲೇ ಎತ್ತಿದ ಕೈಗೆ. ಆರಂಭದಲ್ಲಿ ಪೋಷಕ ಪಾತ್ರಗಳನ್ನೇ ನೆಚ್ಚಿಕೊಂಡಿದ್ದ ಜಗ್ಗೇಶ್‌ಗೆ ವೃತ್ತಿಯಲ್ಲಿ ಟರ್ನಿಂಗ್ ಪಾಯಿಂಟ್ ಆದದ್ದು ತರ್ಲೆ ನನ್ ಮಗ. ಕಾಮಿಡಿಯ ಮೂಲಕವೇ ನಾಯಕನ ಪಟ್ಟ ಅಲಂಕರಿಸಿದ ಜಗ್ಗೇಶ್ ತಮ್ಮ ವಿಚಿತ್ರ ಮ್ಯಾನರಿಸಂ ಹಾಗೂ ವಿಶಿಷ್ಟ ಡೈಲಾಗ್ ಡೆಲಿವರಿ ಮೂಲಕವೇ ತಮ್ಮದೇ ಆದ ಅಭಿಮಾನಿ ವರ್ಗವನ್ನು ಸೃಷ್ಟಿಸಿದರು. ನಂತರ ಸೂಪರ್ ನನ್ ಮಗ, ಮೇಕಪ್, ತೆನಾಲಿ ರಾಮ ಗೋಸ್ ಟು ದುಬೈ, ಸರ್ವರ್ ಸೋಮಣ್ಣ, ಈಶ್ವರ್, ಗುಂಡನ ಮದುವೆ, ಕೋಡಗನ ಕೋಳಿ ನುಂಗಿತ್ತ, ಮನ್ಮಥ, ಬೊಂಬಾಟ್ ಹುಡ್ಗ, ರುಪಾಯಿ ರಾಜ, ಯಾರ್ದೋ ದುಡ್ಡು ಎಲ್ಲಮ್ಮನ ಜಾತ್ರೆ, ಟಾಟಾ ಬಿರ್ಲಾ, ಗಡಿಬಿಡಿ ಗಂಡ, ಕಳ್ಳ ಮಳ್ಳ, ಕಾಸು ಇದ್ದೋನೇ ಬಾಸು, ಹನಿಮೂನ್ ಎಕ್ಸ್‌ಪ್ರೆಸ್ ಹೀಗೆ ಸಾಲು ಸಾಲು ಚಿತ್ರಗಳಲ್ಲಿ ನಟಿಸಿ ಪ್ರೇಕ್ಷಕರನ್ನು ನಗೆಯ ಹೊನಲಲ್ಲಿ ತೇಲಿಸಿದರು. ಜಗ್ಗೇಶ್‌ಗೆ ಇತ್ತೀಚಿನ ದಿನಗಳಲ್ಲಿ ಮತ್ತೆ ಬ್ರೇಕ್ ನೀಡಿದ ಚಿತ್ರವೆಂದರೆ ಗುರುಪ್ರಸಾದ್ ನಿರ್ದೇಶನದ ಮಠ. ಮಠದ ನಂತರ ಎದ್ದೇಳು ಮಂಜುನಾಥ ಚಿತ್ರ ಕೂಡಾ ಜಗ್ಗೇಶ್‌ಗೆ ಅಪಾರ ಯಶಸ್ಸನ್ನು ನೀಡಿತು. ಆದರೆ ದುರದೃಷ್ಟವಶಾತ್ ಜಗ್ಗೇಶ್- ಗುರುಪ್ರಸಾದ್ ಜೋಡಿಯ ನಡುವೆ ಎದ್ದ ವಿರಸ ಅವರಿಬ್ಬರನ್ನು ಬೇರಾಗಿಸಿತು.

ಜಗ್ಗೇಶ್ ಅಂದರೆ ಅಲ್ಲಿ ಅವರ ವಿಶಿಷ್ಟ ಡೈಲಾಗ್ ಡೆಲಿವರಿಗೂ ಮಹತ್ವ ಇರುತ್ತದೆ. ಅಂಥವುಗಳಲ್ಲಿ ಜಗ್ಗೇಶ್ ಉಸುರಿದ ಡೈಲಾಗು ಇಂದಿಗೂ ಜನಮಾನಸದಲ್ಲಿ ದಿನಬಳಕೆಯ ಶಬ್ದಗಳಾಗಿ ಉಳಿದಿವೆ. 'ಆ ಅವ್ವೋ..', 'ಕಡ್ಳೆ ಕಾಯಿ ಕಡ್ಳೆ ಕಾಯಿ...', 'ಐತಲಕಡಿ ಜುಮ್ಮ..', 'ಡಬ್ಬಾ ನನ್ ಮಕ್ಳು..', 'ಓತ್ಲಾ..', 'ಲಕ್ಡಿ ಪಕ್ಡಿ ಜುಮ್ಮ..', 'ಹೊಗೆ ಹಾಕಿಸ್ಕೊಂಡು ಬಿಟ್ಟೀಯಾ..' ಇಂಥ ಶಬ್ದ, ವಾಕ್ಯಗಳೆಲ್ಲವೂ ಜಗ್ಗೇಶ್ ಸಿನಿಮಾಗಳ ಮೂಲಕ ಪ್ರಸಿದ್ಧಿ ಪಡೆದಿವೆ.

ಇಂಥ ಜಗ್ಗೇಶ್ ತಮ್ಮ ಮಕ್ಕಳನ್ನು ಸಿನಿಮಾಕ್ಕೆ ತರುವ ಪ್ರಯತ್ನವನ್ನೂ ಮಾಡಿದ್ದಾರೆ. ಅತ್ತ ತನ್ನ ಕಾಲನ್ನು ರಾಜಕೀಯ ಅಂಗಳದಲ್ಲೂ ಇರಿಸಿದ್ದಾಗಿದೆ. ಸಿನಿಮಾದಲ್ಲೂ ಯಶಸ್ವಿಯಾಗಿ ಮುಂದುವರಿಯುವ ಆಸೆ. ಈ ಹುಟ್ಟುಹಬ್ಬದ ಸಂಭ್ರಮಕ್ಕೆ ಅವರ ಕನಸು ನನಸಾಗಲಿ ಎಂದು ಹಾರೈಸೋಣವೇ?
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಜಗ್ಗೇಶ್, ಮಠ, ಎದ್ದೇಳು ಮಂಜುನಾಥ, ಕಾಮಿಡಿ