ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಮಳೆಯಲಿ ಜೊತೆಯಲಿ ಅಂಜನಾಗೆ ಒಲಿದ ಅದೃಷ್ಟ! (Anjana Sukhani | Maleyali Jotheyali | Ganesh | Kannada Cinema | Bollywood)
ಸುದ್ದಿ/ಗಾಸಿಪ್
Bookmark and Share Feedback Print
 
IFM
ಮಳೆಯಲಿ ಜೊತೆಯಲಿ ಚಿತ್ರದ ಮೂಲಕ ಕನ್ನಡದಲ್ಲಿ ನಟಿಸಿದ ಅಂಜನಾ ಸುಖಾನಿ ಬಾಲಿವುಡ್ ಬೆಡಗಿಯಾದರೂ, ಅದೃಷ್ಟ ಕೈಹಿಡಿದದ್ದು ಕನ್ನಡದಲ್ಲಿ. ಬಾಲಿವುಡ್ಡಿನಲ್ಲಿ 2002ರಿಂದಲೇ ಅದೃಷ್ಟ ಪರೀಕ್ಷಿಸಿಕೊಳ್ಳುತ್ತಿರುವ ಅಂಜನಾ ಸುಖಾನಿಗೆ ಹೇಳಿಕೊಳ್ಳುವಂಥ ಅವಕಾಶಗಳೇನೂ ಒಲಿಯಲಿಲ್ಲ. ಬಂದ ಅವಕಾಶಗಳೂ ತೆರೆಯ ಮೇಲೆ ಮೋಡಿ ಮಾಡಲಿಲ್ಲ. ಬಂದ ದಾರಿಯಲ್ಲೇ ನೇರವಾಗಿ ವಾಪಸ್ ಮರಳಿ, ಪ್ರೇಕ್ಷಕರ ತಲೆಯೊಳಗಂತೂ ಹೋಗುವ ಸಾಹಸ ಮಾಡಲಿಲ್ಲ. ಆದರೆ ಕೊಂಚ ಈಕೆ ದಕ್ಷಿಣದಲ್ಲಿ ಪ್ರಸಿದ್ಧಿಗೆ ಬಂದದ್ದು ಎಂದರೆ ಗೋಲ್ಡನ್ ಸ್ಟಾರ್ ಜೊತೆಗಿನ ಮಳೆಯಲಿ ಜೊತೆಯಲಿ ಚಿತ್ರದಿಂದಾಗಿ ಎಂದರೆ ಸುಳ್ಳಲ್ಲ.

ಅಂದ ಹಾಗೆ ಈ ಬಾಲಿವುಡ್ ಬೆಡಗಿಗೆ ದಕ್ಷಿಣದಲ್ಲಿ ಅದೃಷ್ಟ ಖುಲಾಯಿಸಿದ್ದೇ ತಡ, ಈಗ ಬಾಲಿವುಡ್ಡಿನಲ್ಲೂ ಕೊಂಚ ಅವಕಾಶಗಳು ಹೆಚ್ಚಿದೆ ಎನ್ನಲಾಗುತ್ತಿದೆ. ಅದ್ನನು ಸ್ವತಃ ಅಂಜನಾಳೇ ನಿರಾಕರಿಸುವುದಿಲ್ಲ. ಐಶ್ವರ್ಯಾ ರೈ, ಪ್ರಿಯಾಂಕಾ ಛೋಪ್ರಾ, ದೀಪಿಕಾ ಪಡುಕೋಣೆಯಂಥಾ ನಾಯಕಿಯರೇ ದಕ್ಷಿಣದಲ್ಲಿ ಮಿಂಚಿದ ಮೇಲಷ್ಟೇ ಬಾಲಿವುಡ್ಡಿಗೆ ಕಾಲಿಟ್ಟದ್ದು. ಹಾಗಾಗಿ ನಾನು ಕೂಡ ದಕ್ಷಿಣದಲ್ಲಿ ಅದೃಷ್ಟ ಪರೀಕ್ಷಿಸಿಕೊಂಡೆ. ದಕ್ಷಿಣದ ಚಿತ್ರರಂಗದಲ್ಲೂ ಅತ್ಯುತ್ತಮ ಪ್ರತಿಭೆಗಳಿವೆ. ನನ್ನ ಅಭಿನಯದ ಕನ್ನಡ ಚಿತ್ರ ಸಾಕಷ್ಟು ಸುದ್ದಿ ಮಾಡಿದೆ. ಇದೊಂದು ಉತ್ತಮ ಅನುಭವ. ಇಷ್ಟು ಉತ್ತಮ ಪ್ರತಿಕ್ರಿಯೆ ನನ್ನ ಯಾವ ಬಾಲಿವುಡ್ ಚಿತ್ರಕ್ಕೂ ಬಂದಿಲ್ಲ. ಕನ್ನಡದ್ಲಲಿ ಅಭಿನಯಿಸಿದ ಮೇಲೆ ತೆಲುಗು, ತಮಿಳಿನಿಂದಲೂ ಆಫರ್ ಬರತೊಡಗಿದೆ. ಸದ್ಯ ಅವಕಾಶಗಳ ಸೂಕ್ತ ಆಯ್ಕೆಯಲ್ಲಿ ನಾನಿದ್ದೇನೆ. ಕನ್ನಡದಲ್ಲಿ ಉತ್ತಮ ಅವಕಾಶ ಬಂದರೆ ನನ್ನ ಹೃದಯ ಸದಾ ತೆರೆದಿರಲಿದೆ ಎನ್ನುತ್ತಾಳೆ ಅಂಜನಾ.
IFM


ಈಗಾಗಲೇ ತೆಲುಗು ಚಿತ್ರರಂಗದಲ್ಲಿ ಹೆಸರಾದ ನಾಯಕ ರವಿತೇಜನ ಜೊತೆ ನಟಿಸಿ ಸೈ ಎನಿಸಿಕೊಂಡಿರುವ ಅಂಜನಾ ಮುಂಚೂಣಿ ನಾಯಕಿಯರಲ್ಲೊಬ್ಬಳು ಎಂದು ತೆಲುಗು ಚಿತ್ರರಂಗ ಪಂಡಿತರೂ ಮಾತಾಡತೊಡಗಿದ್ದಾರೆ. ಅಷ್ಟೇ ಅಲ್ಲ, ರವಿತೇಜ ಜೊತೆ ನಟಿಸಿದ್ದರಿಂದ ನನಗೆ ಜನಪ್ರಿಯತೆ ಸಿಕ್ಕಿದೆ ಎನ್ನುತ್ತಾರೆ ಅವರು.

ಆದರೆ ಅಂಜನಾ ತನ್ನ ಕನ್ನಡ ಚಿತ್ರವನ್ನೂ ಮರೆಯುವುದಿಲ್ಲ. ಕನ್ನಡದಲ್ಲಿ ಗಣೇಶ್ ಜೊತೆ ಮಳೆಯಲಿ ಜೊತೆಯಲಿ ಚಿತ್ರ ಯಶಸ್ಸಾಗಿರುವುದೂ ಕೂಡಾ ನನಗೀಗ ಬಾಲಿವುಡ್ಡಿನಲ್ಲಿ ಅವಕಾಶ ಹೆಚ್ಚಿಸಲು ಕಾರಣವಾಗಿದೆ ಎಂಬುದು ಅವರ ಅಂಬೋಣ. ಸದ್ಯಕ್ಕೆ ಅಲ್ಲಾ ಕೇ ಬಂದೇ, ತುಂ ಮಿಲೇ ತೋ ಸಹೀ ಚಿತ್ರಗಳು ಅಂಜನಾ ಕೈಯಲ್ಲಿವೆ. ಕನ್ನಡ ಮಾತನಾಡಲೂ ಕೊಂಚ ಪ್ರಯತ್ನ ಪಟ್ಟಿದ್ದ ಈಕೆ ಮತ್ತೆ ಕನ್ನಡದಡೆಗೆ ಮುಖ ಮಾಡುತ್ತಾಳೋ ಗೊತ್ತಿಲ್ಲ!
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಮಳೆಯಲಿ ಜೊತೆಯಲಿ, ಗಣೇಶ್, ಅಂಜನಾ ಸುಖಾನಿ