'ಕಾರ್ತಿಕ್' ಚಿತ್ರದಲ್ಲಿ 'ಸರ್ಕಸ್' ಹುಡುಗಿ ಅರ್ಚನಾ ಗುಪ್ತಾ!
MOKSHA
ಪರಭಾಷಾ ನಟಿಯರೆಂದರೆ ಕನ್ನಡದ ನಿರ್ಮಾಪಕರಿಗೆ ಏನೋ ಒಂಥರ ಅಕ್ಕರೆ. ಪರಭಾಷಾ ನಟಿಯರು ಒಂದು ಕನ್ನಡ ಚಿತ್ರದಲ್ಲಿ ಅಭಿನಯಿಸಿದರೆ ಸಾಕು ಎಂದು ರತ್ನಕಂಬಳಿ ಹಾಸಿ ಕರೆಯುವ ನಿರ್ದೇಶಕ, ನಿರ್ಮಾಪಕರಿಗೇನೂ ಕನ್ನಡದಲ್ಲಿ ಬರವಿಲ್ಲ. ಇದಕ್ಕೆ ಈಗ ಸಾಕ್ಷಿಯಾಗಿರುವುದು ಕಾರ್ತಿಕ್ ಚಿತ್ರ. ಈ ಚಿತ್ರಕ್ಕಾಗಿ ಇದೀಗ ಈ ಹಿಂದೆ ಗಣೇಶ್ ಜೊತೆ ಸರ್ಕಸ್ ಚಿತ್ರದಲ್ಲಿ ನಟಿಸಿದ್ದ ಅರ್ಚನಾ ಗುಪ್ತಾ ಆಯ್ಕೆಯಾಗಿದ್ದಾರೆ.
ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ಸರ್ಕಸ್ ಚಿತ್ರದಲ್ಲಿ ಅಭಿನಯಿಸಿದ ಅರ್ಚನಾ ಗುಪ್ತಾ ಮತ್ತೆ ನವರಸ ನಾಯಕ ಜಗ್ಗೇಶ್ ಜೊತೆ ಲಿಫ್ಟ್ ಕೊಡ್ಲಾ? ಎಂಬ ಚಿತ್ರದಲ್ಲೂ ನಟಿಸಿದ್ದಾರೆ. ಆದರೆ ಈ ಚಿತ್ರವಿನ್ನೂ ಬಿಡುಗಡೆ ಕಂಡಿಲ್ಲ. ಅಷ್ಟರಲ್ಲಾಗದಲೇ ಅರ್ಚನಾಗೆ ಮತ್ತೊಂದು ಅವಕಾಶ ಬಂದಿದೆ. ಅದು ಕಾರ್ತಿಕ್.
ಸತೀಶ್ ಶೆಟ್ಟಿ ನಿರ್ದೇಶನ ಮಾಡುತ್ತಿರುವ ಕಾರ್ತಿಕ್ ಎಂಬ ಚಿತ್ರವನ್ನು ಎಸ್. ವೇಣುಗೊಪಾಲ್ ನಿರ್ಮಿಸುತ್ತಿದ್ದಾರೆ. ಚಿತ್ರ ಈಗಾಗಲೇ ಸೆಟ್ಟೇರಿದ್ದು, ಚಿತ್ರದ ನಾಯಕನ ಹೆಸರು ಕಾರ್ತಿಕ್. ಈ ಹಿಂದೆ ಯುವ ಚಿತ್ರದಲ್ಲೂ ಅಭಿನಯಿಸಿದ್ದಾರೆ.
ತುಳು ರಂಗಭೂಮಿಯಲ್ಲಿ ಪ್ರಸಿದ್ದರಾದ 'ತೆಲಿಕೆದ ಬೊಳ್ಳಿ' ದೇವದಾಸ್ ಕಾಪಿಕಾಡ್ ಇದೀಗ ಕಾರ್ತಿಕ್ ಮೂಲಕ ಮತ್ತೊಮ್ಮೆ ಕ್ಯಾಮರಾ ಎದುರಿಸುತ್ತಿದ್ದಾರೆ. ಈ ಹಿಂದೆ ರಮೇಶ್ ಅರವಿಂದ್ ಅವರ 'ವೆಂಕಟ ಇನ್ ಸಂಕಟ' ಚಿತ್ರದಲ್ಲಿನ ಅಭಿನಯಕ್ಕೆ ದೇವದಾಸ್ ಮೆಚ್ಚುಗೆಗೆ ಪಾತ್ರರಾಗಿದ್ದರು. ಚಿತ್ರದಲ್ಲಿ ಅವಿನಾಶ್, ಭವ್ಯ, ಮಿಲಿಂದ್ ಗಿನಾಜಿ, ಸುನಿಲ್ ಮತ್ತಿತರರಿದ್ದಾರೆ. ಚಿತ್ರಕ್ಕೆ ಜಾನ್ ವರ್ಕಿ ಸಂಗೀತ, ಹಾಗೂ ಮಂಜುನಾಥ್ ನಾಯಕ್ ಅವರ ಛಾಯಗ್ರಹಣವಿದೆ.