ನೈಜತೆಗಾಗಿ ಹಲವು ಬಾರಿ ಫೈಟ್ ಮಾಡುವಾಗ ಅಥವಾ ಜಂಪ್ ಮಾಡುವಾಗ ಪೆಟ್ಟು ಮಾಡಿಕೊಳ್ಳುವುದು ಉಂಟು. ಅದಕ್ಕೆ ಸಾಕ್ಷಿಯೆಂಬಂತೆ ಇತ್ತೀಚೆಗೆ ನಟ ಯಶ್ ಯಶಸ್ವಿಯಾಗಿ 400 ಅಡಿಗಳ ಎತ್ತರದಿಂದ ಜಿಗಿದು ಭೇಷ್ ಎನಿಸಿಕೊಂಡಿದ್ದಾರೆ.
ಹೌದು ರಾಜಧಾನಿ ಚಿತ್ರದ ಕ್ಲೈಮ್ಯಾಕ್ಸ್ ಫೈಟ್ಗಾಗಿ 24 ಅಂತಸ್ತುಗಳಿಂದ ಧುಮುಕಿ ಇಡೀ ಚಿತ್ರತಂಡ ನಿಬ್ಬೇರಗಾಗುವಂತೆ ಮಾಡಿದ್ದಾರೆ ರಾಕಿಂಗ್ ಸ್ಟಾರ್ ಯಶ್. ಹಾಲಿವುಡ್, ಬಾಲಿವುಡ್ಗಳಲ್ಲಾದರೆ ಅದಕ್ಕೆ ಬೇಕಾದ ಅತ್ಯಾಧುನಿಕ ಸೌಲಭ್ಯಗಳಿರುತ್ತದೆ. ಆದರೆ ಸ್ಯಾಂಡಲ್ವುಡ್ನಲ್ಲಿ? ಆದರೂ ಇದ್ದ ಸವಲತ್ತಿನಲ್ಲಿಯೇ ಧೈರ್ಯದಿಂದ ಜಿಗಿದೆ ಎನ್ನುತ್ತಾರೆ ಯಶ್.
ಹೇಗೆ ಸಾಧ್ಯವಾಯಿತು ಎಂಬ ಅನುಮಾನ ಮತ್ತೆ ಮತ್ತೆ ಕಾಡತೊಡಗಿದಾಗ ನಿರ್ಮಾಪಕರು ಅಲಾ್ತ್ರಮೋಶನ್ ಕ್ಯಾಮರಾ ತರಿಸಿದ್ದರು. ಜೊತೆಗೆ ರವಿವರ್ಮ ಅವರಂತಹ ಸಾಹಸ ಸಂಯೋಜಕರಿದ್ದರು. ರಿಯಲಿಸ್ಟಿಕ್ ಆಗಿರಲಿ ಅಂತ ಹಾಗೆ ಮಾಡಿದೆ ಎಂದು ಸಮಾಜಾಯಿಷಿ ಕೊಟ್ಟರು. ಜೊತೆಗೆ ನಂಬಲು ಸಾಧ್ಯವಿಲ್ಲ ಎಂದಾಗ ತಮ್ಮ ಮೊಬೈಲ್ನಲ್ಲಿ ರೇಕಾರ್ಡ್ ಆಗಿದ್ದ ವೀಡಿಯೋ ತೋರಿಸಿದರು. ಕೊನೆಗೆ ಹೈಡ್ರೌಲಿಕ್ ರೋಪ್ ಹಾಕಿ ಜಿಗಿದಿರುವುದಾಗಿ ಹೇಳಿದರು. ಅಲ್ಲಿಗೆ ಪತ್ರಕರ್ತರ ಪ್ರಶ್ನೆಗೆ ಉತ್ತರ ಸಿಕ್ಕಿತು.