ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಪ್ರೀತಿಸುತ್ತಿರುವವರು ಸಿನಿಮಾ ನೋಡ್ರಿ ಎಂದ ಅಮೂಲ್ಯ (Amulya | Premism | Rathnaja | Cheluvina Chittara)
ಸುದ್ದಿ/ಗಾಸಿಪ್
Bookmark and Share Feedback Print
 
PR
ಚೆಲುವಿನ ಚಿತ್ತಾರ, ಚೈತ್ರದ ಚಂದ್ರಮದ ಬೆಡಗಿ ಅಮೂಲ್ಯ ಇದೀಗ ಸಂಪೂರ್ಣ ಡಿಫರೆಂಟ್ ಆಗಿ ಪ್ರೇಮಿಸಂ ಮೂಲಕ ಸದ್ಯದಲ್ಲೇ ತೆರೆಗೆ ಬರಲಿದ್ದಾರೆ.

ಇದು ಅವರ ಜೀವನದ ಕಥೆಯಂತೆ. ನಿಜ ಜೀವನದಲ್ಲಿ ನಾನು ಯಾರೊಂದಿಗೂ ಹೆಚ್ಚು ಮಾತನಾಡೋಲ್ಲ. ಸೈಲೆಂಟ್ ಆಗಿರ್ತೀನಿ. ಅದೇ ರೀತಿಯ ಕ್ಯಾರೆಕ್ಟರ್ ಪ್ರೇಮಿಸಂನಲ್ಲಿದೆ. ಹಾಗಾಗಿ ಅಭಿನಯ ಸಹಜವಾಗಿಯೇ ಮೂಡಿ ಬಂದಿದೆ ಅಂತಾರೆ ಅಮೂಲ್ಯ.

ಈಗಷ್ಟೇ ಪ್ರಥಮ ಪಿಯುಸಿ ಪರೀಕ್ಷೆ ಮುಗಿಸಿ ಬಂದಿರುವ ಆಕೆಗೆ ಅದರ ಬಗ್ಗೆ ಚಿಂತೆಯಿಲ್ಲ. ಆದರೆ ಪ್ರೇಮಿಸಂ ಫಲಿತಾಂಶದ ಬಗ್ಗೆ ಕಾತರವಿದೆಯಂತೆ. ಪ್ರೀತಿಸಬೇಕಾದವರು, ಪ್ರೀತಿಸುತ್ತಿರುವವರು, ಪ್ರೀತಿಸುತ್ತಲೇ ಇರುವವರೂ ಸೇರಿದಂತೆ ಪ್ರತಿಯೊಬ್ಬರು ನೋಡಬೇಕಾದ ಚಿತ್ರವಿದು. ಪ್ರೀತಿಸುವವರಿಗೆ ಮುಂದೇನು ಎಂಬ ಗೊಂದಲವಿರುತ್ತದೆ. ಅದಕ್ಕೆ ತಕ್ಕಂತೆ ಅವರು ಹಲವಾರು ಸಮಸ್ಯೆಗಳನ್ನು ಎದುರಿಸುವುದೇ ಪ್ರೇಮಿಸಂ ಎಂದೂ ಚಿತ್ರದ ಬಗ್ಗೆ ಹೇಳುತ್ತಾರೆ ಅಮೂಲ್ಯ.

ಸದ್ಯದಲ್ಲೇ ಬರಲಿರುವ ಪ್ರೇಮಿಸಂ ಚಿತ್ರಕ್ಕಾಗಿ ಅಮುಲ್ ಬೇಬಿ ಅಮೂಲ್ಯಗೆ ಶುಭಹಾರೈಸುವ ಸರದಿ ನಿಮ್ಮದಾಗಲಿ..
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಅಮೂಲ್ಯ, ಪ್ರೇಮಿಸಂ, ರತ್ನಜ, ಚೆಲುವಿನ ಚಿತ್ತಾರ