ರಾಣಿ ರಾಜಿಯಾಗಿರುವ ಕಥೆ ಎಲ್ಲರಿಗೂ ಗೊತ್ತಿದೆ. ಸಂಜಯ್ ನಿರ್ದೇಶನದ ರಾಜಿ ಚಿತ್ರದಲ್ಲಿ ರಾಣಿ ನಾಯಕಿಯಾಗಿದ್ದಾರೆ. ಚಿತ್ರಕ್ಕೆ ಮನೋಜ್ ಕುಮಾರ್ ನಾಯಕ. ಚಿತ್ರದ ನಿರ್ಮಾಪಕರೂ ಇವರೇ. ಈಗಾಗಲೇ ಶೇ.80-90 ಭಾಗದ ಚಿತ್ರೀಕರಣ ಮುಗಿಸಿದೆ ಚಿತ್ರತಂಡ. ಐದು ಹಾಡುಗಳು ಹಾಗೂ ಇನ್ನೊಂದು ದಿನದ ಮಾತಿನ ಭಾಗದ ಚಿತ್ರೀಕರಣವಷ್ಟೇ ಬಾಕಿ ಉಳಿದಿದೆ. ಇದುವರೆಗಿನ ಚಿತ್ರೀಕರಣ ತುಮಕೂರು ಸುತ್ತಮುತ್ತವೇ ನಡೆದಿದ್ದು, ಉಳಿದ ಭಾಗ ಬೆಂಗಳೂರು, ಚಿಕ್ಕಮಗಳೂರು ಮೊದಲಾದ ಕಡೆಗಳಲ್ಲಿ ನಡೆಸಲಿದ್ದಾರೆ.
ಚಿತ್ರದ ಸಂಕಲನ ಕಾರ್ಯದಲ್ಲಿ ತೊಡಗಿರುವ ಸಂಗೀತ ನಿರ್ದೇಶಕರಾದ ಜಾನ್ ಪೀಟರ್‌ಗೆ ಇದು ಕನ್ನಡದಲ್ಲಿ ಇದು ಮೊದಲ ಚಿತ್ರ. ಈ ಮೊದಲು ತಮಿಳಿನಲ್ಲಿ ಎರಡು ಚಿತ್ರಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಅದೇ ರೀತಿ ಚಿತ್ರದ ಛಾಯಾಗ್ರಾಹಕರಾದ ಬಾಲಾ ಗಣೇಶ್ ಅವರಿಗೂ ಇದು ಮೊದಲ ಚಿತ್ರ. ಅಂದ ಹಾಗೆ ಉಡ ಚಿತ್ರದ ನಾಯಕಿ, ಹುಂಜ ಚಿತ್ರದ ಐಟಂ ಗರ್ಲ್ ಸ್ವಾತಿ ಇಲ್ಲಿ ಪೋಷಕ ನಟಿ.