ವಾಯುಪುತ್ರ ಚಿತ್ರದ ಮೂಲಕ ಭರ್ಜರಿ ಎಂಟ್ರಿ ಕೊಟ್ಟ ಸರ್ಜಾ ಕುಡಿ ಚಿರಂಜೀವಿ ಸರ್ಜಾರ ಚಿರು ಚಿತ್ರ ಇದೇ ಮಾ.25ರಂದ ಸೆಟ್ಟೇರಲಿದೆ. ಬೆಂಗಳೂರು, ಊಟಿ ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿ 60 ದಿನಗಳ ಚಿತ್ರೀಕರಣ ನಡೆಯಲಿದೆ. ಮುಸ್ಸಂಜೆ ಮಾತು ಚಿತ್ರದ ನಿರ್ಮಾಪಕ ಸುರೇಶ್ ಜೈನ್ ನಿರ್ಮಿಸುತ್ತಿರುವ ಈ ಚಿತ್ರವನ್ನು ಮಹೇಶ್ ಬಾಬು ನಿರ್ದೇಶಿಸುತ್ತಿದ್ದಾರೆ.
ಚಿರು ಚಿತ್ರದ ಚಿತ್ರಕಥೆ, ಸಂಭಾಷಣೆ ಎಲ್ಲವೂ ನಿರ್ದೇಶಕ ಮಹೇಶ್ ಬಾಬು ಅವರದೇ. ಸುಂದರನಾಥ ಸುವರ್ಣ ಅವರ ಛಾಯಾಗ್ರಹಣ, ಗಿರಿಧರ್ ದಿವಾನ್ ಅವರ ಸಂಗೀತ, ಶ್ರೀ ಅವರ ಸಂಕಲನ ಈ ಚಿತ್ರಕ್ಕಿದೆ.
ಚಿತ್ರಕ್ಕೆ ನಾಯಕಿಯೂ ಗೊತ್ತು ಮಾಡಿದ್ದಾಗಿದೆ. ಕೃತಿ ಖರ್‌ಬಂದಾ ಎಂಬ ಕನ್ನಡ ಗೊತ್ತಿಲ್ಲದ ಅರಗಿಣಿ ಚಿರುಗೆ ಈ ಚಿತ್ರದ ಮನದನ್ನೆ. ಚಿತ್ರದಲ್ಲಿ ಉಳಿದಂತೆ, ರಂಗಾಯಣ ರಘು ಹಾಗೂ ಬುಲೆಟ್ ಪ್ರಕಾಶ್ ಅವರ ಜುಗಲ್ ಬಂದಿಯ ಮೋಡಿಯೂ ಇದೆ!
ಚಿರಂಜೀವಿ ಸರ್ಜಾ ಈ ಚಿತ್ರದ ಜೊತೆಗೇ ಕೋಟಿ ರಾಮು ಅವರ ದೊಡ್ಡ ಬ್ಯಾನರಿನ ಗಂಡೆದೆ ಚಿತ್ರದಲ್ಲೂ ನಟಿಸುತ್ತಿದ್ದು, ಭರ್ಜರಿ ನಿರೀಕ್ಷೆಯಲ್ಲೇ ಇದ್ದಾರೆ.