ಕನ್ನಡದ ಕುವರಿ ತೇಜಸ್ವಿನಿ ಅವರ ಅಭಿನಯದ ತರಂಗಿಣಿ ಚಿತ್ರ ಇದೀಗ ಸದ್ದಿಲ್ಲದೆ, ಸುದ್ದಿ ಮಾಡದೆ ಚಿತ್ರೀಕರಣ ಮುಗಿಸಿದೆ. ಈ ಹಿಂದೆ ವಿನೋದ್ ರಾಜ್ ಅಭಿನಯದ ಯಾರದು? ಎಂಬ ಚಿತ್ರ ಮಾಡಿ ಭೇಷ್ ಎಂದು ವಿಮರ್ಶಕರಿಂದ ಬೆನ್ನುತಟ್ಟಿಸಿಕೊಂಡಿದ್ದ ಶ್ರೀನಿವಾಸ್ ಕೌಶಿಕ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.
ಈ ಚಿತ್ರದಲ್ಲಿ ತೇಜಸ್ವಿನಿಗೆ ಪತ್ರಕರ್ತೆಯ ಪಾತ್ರ. ವಿದೇಶದಿಂದ ಸ್ವದೇಶಕ್ಕೆ ಬರುವ ನಾಯಕ ಮೋಹನ್ ಹಾಗೂ ಪತ್ರಕರ್ತೆಯಾಗಿರುವ ತರಂಗಿಣಿಯ ನಡುವೆ ಸಾಗುವ ಕಥೆ ಈ ತರಂಗಿಣಿಯಂತೆ. ಇದು ಸಾಮಾಜಿಕ ಸಂದೇಶ ಸಾರುವ ಚಿತ್ರ ಎಂದೂ ಚಿತ್ರತಂಡ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದೆ. ಯಾವುದಕ್ಕೂ ಚಿತ್ರ ಬಿಡುಗಡೆಯವರೆಗೂ ಕಾಯಲೇಬೇಕು.
ಈ ಚಿತ್ರ ಉಷಾ ನವರತ್ನರಾಮ್ ಅವರು 1992ರಲ್ಲಿ ಬರೆದ ನೀನ್ಯಾರಿಗಾದೆಯೋ ಕಾದಂಬರಿಯ ಕಥೆಯನ್ನು ಆಧರಿಸಿದೆ. ವೈ.ಶ್ರೀನಿವಾಸ್, ಡಿ.ಬಿ.ಕುಮಾರಸ್ವಾಮಿ ಅವರ ನಿರ್ದೇಶನದ ಈ ಚಿತ್ರಕ್ಕೆ ಎಂ.ಎಸ್.ಮಾರುತಿ ಅವರು ಸಂಗೀತ ಸಂಯೋಜಿಸಿದ್ದಾರೆ.