ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ರಾಜ್ಯಸಭೆಗೆ ಬಿ.ಜಯಶ್ರೀ: ಇದು ಅಧಿಕಾರ ಅಲ್ಲ ಗೌರವ (B.Jayashree | Kannada Theatre | Rajya Sabha | Nagabharana)
ಸುದ್ದಿ/ಗಾಸಿಪ್
Bookmark and Share Feedback Print
 
ಕೊನೆಗೂ ಕನ್ನಡ ರಂಗಭೂಮಿ ಮತ್ತು ಸಿನಿಮಾ ರಂಗಗಳ ಬಗ್ಗೆ ಈಗ ಹೊಸ ಆಶಾಭಾವ ಮೂಡಿದೆ. ಅದಕ್ಕೆ ಕಾರಣ ರಾಜ್ಯಸಭೆಗೆ ಆಯ್ಕೆಯಾಗಿರುವ ಬಿ. ಜಯಶ್ರೀ. ನಾಟಕ ಕಿರುತೆರೆಗಳಲ್ಲಿ ನಟಿಯಾಗಿ, ನಿರ್ದೇಶಕಿಯಾಗಿ, ವಿಶಿಷ್ಟ ಶೈಲಿಯ ಗಾಯಕಿಯಾಗಿ ಗಮನ ಸೆಳೆದಿರುವ ಬಿ. ಜಯಶ್ರೀ ಅವರಿಗೆ ಈ ಸಿಕ್ಕಿರುವುದು ಅಧಿಕಾರ ಅಲ್ಲ, ಗೌರವ. ಸಹಜವಾಗಿಯೇ ಈಗ ಅವರ ಮೇಲೆ ನಿರೀಕ್ಷೆಗಳು ಹೆಚ್ಚಿವೆ.

ಬಿ.ಜಯಶ್ರೀ ಅವರು ರಾಜ್ಯಸಭೆಗೆ ಆಯ್ಕೆಯಾದ ಬಗ್ಗೆ ಸಂತಸ ವ್ಯಕ್ತಪಡಿಸುವವರಲ್ಲಿ ನಿರ್ದೇಶಕ ಟಿ.ಎಸ್.ನಾಗಾಭರಣ ಅವರೂ ಒಬ್ಬರು. ಈ ಬಗ್ಗೆ ಮಾತನಾಡಿದ ಅವರು, ಜಯಶ್ರೀ ಅವರ ಮೇಲೆ ನಿರೀಕ್ಷೆಗಳು ಹುಟ್ಟುವುದು ಸಹಜ. ಆದರೆ ನಿರೀಕ್ಷಿಸುವುದು ತಪ್ಪು. ಅವರು ಸಿನಿಮಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಅವರು ಕೇವಲ ಕಲಾವಿದರ ಪ್ರತಿನಿಧಿಯಲ್ಲ. ರಾಜ್ಯದ ಪ್ರತಿನಿಧಿ. ಏನಾದರೂ ಎಲ್ಲವನ್ನು ಗೆಲ್ಲುವ ಶಕ್ತಿ ಅವರಲ್ಲಿದೆ ಎನ್ನುತ್ತಾರೆ ನಾಗಾಭರಣ.

ಇದಕ್ಕೆ ರಂಗ ನಿರ್ದೇಶಕಿ, ನಟಿ ಅರುಂಧತಿ ನಾಗ್ ಹೇಳುವುದಿಷ್ಟೇ. ರಾಷ್ಟ್ತ್ರೀಯ ಮಟ್ಟದಲ್ಲಿ ರಂಗಭೂಮಿಯ ಸಮಸ್ಯೆಗಳು ಚರ್ಚೆಯಾಗಲು, ಸಮಸ್ಯೆಗಳು ಪರಿಹಾರ ಆಗಲು ಜಯಶ್ರೀಯವರು ಶ್ರಮಿಸುವರು ಎಂಬ ನಂಬಿಕ ನನ್ನಲ್ಲಿದೆ ಎನ್ನುತ್ತಾರೆ. ಒಟ್ಟಿನಲ್ಲಿ ಬಿ. ಜಯಶ್ರೀ ಅವರ ಮೇಲೆ ಸಾಕಷ್ಟು ನೀರೀಕ್ಷೆಗಳು, ಕುತೂಹಲಗಳು ಹೆಚ್ಚಿವೆ. ಇವೆಲ್ಲವುದಕ್ಕೂ ಜಯಶ್ರೀಯವರೇ ಉತ್ತರ ಹೇಳಬೇಕು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಬಿಜಯಶ್ರೀ, ಕನ್ನಡ ರಂಗಭೂಮಿ, ರಾಜ್ಯಸಭೆ, ಟಿಎಸ್ನಾಗಾಭರಣ