ದುನಿಯಾ ವಿಜಯ್ ಆತ್ಮಹತ್ಯೆ ಮಾಡಿಕೊಂಡಿದ್ದಾರಂತೆ!!! ಹಾಗೊಂದು ಸುದ್ದಿಯೊಂದು ಮೊಬೈಲಿನಿಂದ ಮೊಬೈಲಿಗೆ ಗಿರಕಿ ಹೊಡೆಯುತ್ತಿತ್ತು. ಆದರೆ ಆ ಸುದ್ದಿ ಕೇಳಿ ಸ್ವತಃ ವಿಜಯ್ ಕೂಡಾ ದಂಗಾಗಿದ್ದಾರಂತೆ!
ನಾನು ಆತ್ಮಹತ್ಯೆ ಮಾಡಿಕೊಂಡೆನಾ.. ಅಯ್ಯಯ್ಯೋ, ನಾನಂತೂ ಕರಿಚಿರತೆ ಚಿತ್ರದಲ್ಲಿ ಬ್ಯುಸಿಯಾಗಿದ್ದೇನೆ. ನಾನು ಈವರೆಗೆ ಆತ್ಮಹತ್ಯೆ ಮಾಡಲು ಪ್ರಯತ್ನಿಸಿದವನೂ ಅಲ್ಲ, ಯೋಚಿಸಿದವನೂ ಅಲ್ಲ. ಆತ್ಮಹತ್ಯೆಯಂತಹ ವಿಷಯ ಚಿಂತೆ ಮಾಡೋದಕ್ಕೂ ಸಮಯಾನೇ ಇಲ್ಲದಿರುವಾಗ ಆತ್ಮಹತ್ಯೆ ಹೇಗೆ ಮಾಡಿಕೊಂಡೇನು ಹೇಳಿ ಎಂದು ವಿಜಯ್ ಮರುಪ್ರಶ್ನೆ ಹಾಕಿದ್ದಾರೆ.
ನನ್ನ ಏಳಿಗೆಯನ್ನು ಕಂಡರೆ ಕೆಲವರಿಗೆ ಸಹಿಸಲು ಆಗುತ್ತಿಲ್ಲ. ಇದೇ ಕಾರಣಕ್ಕೆ ನನ್ನ ವಿರುದಧ ಇಂಥ ಪಿತೂರಿ ನಡೆಸಿದ್ದಾರೆ. ಎಸ್ಎಂಎಸ್ ಮೂಲಕ ನನ್ನ ವಿರುದ್ಧ ಸುಳ್ಳು ಮೆಸೇಜ್‌ಗಳನ್ನು ಎಸ್‌ಎಂಎಸ್ ಮೂಲಕ ಹರಡುತ್ತಿದ್ದಾರೆ. ಈ ಸಂಬಂಧ ನಾನು ಪೊಲೀಸರಿಗೆ ದೂರು ನೀಡುವುದಾಗಿ ವಿಜಯ್ ದೂರಿದ್ದಾರೆ.
ಎಸ್ಎಂಎಸ್ ಮೂಲಕ ಸುಳ್ಳು ಸುದ್ದಿ ಹರಡುವುದು ಸೈಬರ್ ಕ್ರೈಂ ಅಡಿಯಲ್ಲಿ ಬರುವುದರಿಂದ ಸೈಬರ್ ಕ್ರೈಂ ಪೊಲೀಸರು ಈ ಪ್ರಕರಣ ದಾಖಲಿಸಿದ್ದು ತನಿಖೆ ನಡೆಸುತ್ತಿದ್ದಾರೆ.