ಕನ್ವರ್ಲಾಲ್ ನಾಯಕಿ ಯಾರೆಂಬುದು ಈಗ ಖಚಿತವಾಗಿದೆ. ಈ ಮೊದಲು ಈ ಚಿತ್ರಕ್ಕೆ ಪ್ರಿಯಾಮಣಿ ನಾಯಕಿ ಎಂಬ ಗುಲ್ಲು ಗಾಂಧಿನಗರದಲ್ಲಿ ಹಬ್ಬಿತ್ತು. ಈಗ ಹೊಸ ಸುದ್ದಿಯೊಂದು ಬಂದಿದೆ. ಕನ್ನಡದ ಒಂದು ಕಾಲದ ಜನಪ್ರಿಯ ಚಿತ್ರ 'ಅಂತ'ದ ರಿಮೇಕ್ ಆಗಿರುವ ಕನ್ವರ್‌ಲಾಲ್ ಚಿತ್ರಕ್ಕೆ ನಾಯಕಿ ಪಾರ್ವತಿ ಮೆನನ್.
ಹೌದು. ಮೂಲ ಚಿತ್ರದಲ್ಲಿ ಲಕ್ಷ್ಮೀ ಮಾಡಿದ ಪಾತ್ರವನ್ನು ಪಾರ್ವತಿ ಮಾಡುತ್ತಿದ್ದಾರೆ. ಈಗಾಗಲೇ ಈ ಬಗ್ಗೆ ಕನ್ವರ್ಲಾಲ್ ಚಿತ್ರದ ನಿರ್ಮಾಪಕ ಆರ್. ಶಂಕರೇಗೌಡ ನಟಿ ಪಾರ್ವತಿ ಮೆನನ್ ಅವರನ್ನು ಭೇಟಿ ಮಾಡಿದ್ದಾರಂತೆ. ಸಂಭಾವನೆ ವಿಷಯ ಒಕೆಯಾದರೆ ಪಾರ್ವತಿ ಕನ್ವರ್‌ಲಾಲ್ ಕೈ ಹಿಡಿಯುವುದು ಗ್ಯಾರಂಟಿ.
ಮಿಲನ ಚಿತ್ರದ ಮೂಲಕ ಕನ್ನಡಕ್ಕೆ ಬಂದ ಪಾರ್ವತಿ, ಮಳೆ ಬರಲಿ ಮಂಜೂ ಇರಲಿ ಹಾಗೂ ಪೃಥ್ವಿ ಚಿತ್ರದ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಮಿಲನ ಒಂದು ವರ್ಷಗಳ ಕಾಲ ಭರ್ಜರಿ ಗಳಿಕೆ ಮಾಡಿತ್ತು. ಇದಾದ ಮೇಲೆ ಅದ್ಯಾಕೋ ಮಳೆ ಬರಲಿ ಮಂಜೂ ಇರಲಿ ಉತ್ತಮ ಪ್ರತಿಕ್ರಿಯೆ ಪಡೆದರೂ, ಪ್ರೇಕ್ಷಕನ ಹಾರೈಕೆ ದ್ಕಕಿದ್ದು ಕಡಿಮೆ. ಪುನೀತ್ ಜೊತೆಗಿನ ಪೃಥ್ವಿ ಚಿತ್ರ ಇನ್ನು ಬಿಡುಗಡೆಯಾಗಬೇಕಿದೆ. ಅಷ್ಟಾಗಲೇ ಈಗ ಕಿಚ್ಚ ಸುದೀಪ್‌ಗೆ ನಾಯಕಿಯಾಗುವ ಅವಕಾಶ ಪಾರ್ವತಿಗೆ ಒಲಿದಿದೆ.