ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಪ್ರಯತ್ನವನ್ನಬಹುದಾದ ಐತಲಕ್ಕಡಿ ಚಿತ್ರ ಶೀಘ್ರದಲ್ಲಿ ತೆರೆಗೆ ಬರಲಿದೆ. ಇದೇ ಮೊದಲ ಬಾರಿಗೆ ಈ ಚಿತ್ರದಲ್ಲಿ ಸುಮಾರು 108ಕ್ಕೂ ಅಧಿಕ ಮಂದಿ ಕಲಾವಿದರು ಭಾಗವಹಿಸಿದ್ದಾರೆ.
ಐತಲಕ್ಕಡಿ ಟೈಟಲ್ ಹಾಡಿಗೆ ನವರಸನಾಯಕ ಜಗ್ಗೇಶ್ ಕುಣಿದಿದ್ದಾರೆ. ಹಾಗೆಯೇ ಕನ್ನಡ ನಾಡಿನ ಘನತೆಯೆತ್ತ ಹಾಡಿಗೆ ಉದಯೋನ್ಮುಖ ನಾಯಕರಾದ ಸುಮಾರು 21 ಮಂದಿ ಕಲಾವಿದರು ಹೆಜ್ಜೆ ಹಾಕಿದ್ದಾರೆ. ಇನ್ನೊಂದು ಸಾಹಸ ದೃಶ್ಯದಲ್ಲಿ ದುನಿಯಾ ವಿಜಯ್ ನಟಿಸಿದ್ದಾರೆ. ಅಲ್ಲದೆ, ವಿಜಯ್ ರಾಘವೇಂದ್ರ, ಸುದೀಪ್, ಕ್ರೇಜಿಸ್ಟಾರ್ ರವಿಚಂದ್ರನ್ ಮೊದಲಾದವರು ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ.
ಇಲ್ಲಿ ನಾಯಕಿಯಾಗಿ ನೀತೂ ಅಭಿನಯಿಸಿದ್ದಾರೆ. ಈಕೆ ಇಲ್ಲಿ ಹೂ ಮಾರುವ ಹುಡುಗಿ. ನಾಯಕನಾಗಿ ಬುಲೆಟ್ ಪ್ರಕಾಶ್ ಮೊದಲ ಬಾರಿಗೆ ನಟಿಸುತ್ತಿದ್ದಾರೆ. ಹಾಸ್ಯ ಪ್ರಧಾನವಾದ ಈ ಚಿತ್ರದಲ್ಲಿ ರಂಗಾಯಣ ರಘು ಪ್ರಮುಖ ಭೂಮಿಕೆಯಲ್ಲಿದ್ದಾರೆ.