ಅಜಾ ಮೇರಿ ಗಾಡಿ ಮೇ ಬೈಟ್ ಜಾ.. ಎಂಬ ಖ್ಯಾತ ಹಾಡಿಗೆ ಧ್ವನಿ ನೀಡಿದ ಪಾಪ್ ಗಾಯಕ ಬಾಬಾ ಸೆಹಗಲ್ ಈಗ ಕನ್ನಡಕ್ಕೆ ಬಂದಿದ್ದಾರೆ. ಕನ್ನಡದಲ್ಲಿ ಹಾಡಿರುವುದಷ್ಟೇ ಅಲ್ಲ, ಆ ಹಾಡಿನಲ್ಲೂ ಕಾಣಿಸಿಕೊಂಡಿದ್ದಾರೆ ಕೂಡಾ.
ಹೌದು. ನೀಲ್ ಕಮಲ್ ನಿರ್ದೇಶನದ 'ಪುನೀತ' ಎಂಬ ಚಿತ್ರಕ್ಕೆ ಕಬೀರ್ ರಾಜ್ ಸಂಗೀತ ಸಂಯೋಜನೆಯ 'ಕಾಲೇಜಿನಲ್ಲಿ ಒಂದು ಹುಡುಗಿಯ ನೋಡಿದ್ದು ಖರೇ.. ' ಎಂಬ ಹಾಡಿಗೆ ಧ್ವನಿ ನೀಡಿದ್ದು ಮಾತ್ರವಲ್ಲ. ಹಾಡಿಗೆ ಹೆಜ್ಜೆ ಕೂಡ ಹಾಕಿದರಂತೆ.
ಇದರಿಂದ ನೀತೂ ಫುಲ್ ಖುಷಿಯಾಗಿದ್ದಾರೆ. ಅದಕ್ಕೆ ಕಾರಣವೂ ಇದೆ. ಸುಮಾರು 12 ವರ್ಷಗಳ ಹಿಂದೆ ಬಾಬಾ ಅವರ ಅಜಾ ಮೇರಿ.. ಹಾಡು ಬಂದಾಗ, ನೀತು ಕಾಲೇಜ್ ಹುಡುಗಿಯಂತೆ. ಆಗ ಅವರ ಸಹಪಾಠಿ ಹುಡುಗರು ಬೈಕ್ ತಂದು ನಿಲ್ಲಿಸಿ, ಈ ಹಾಡು ಹಾಡುತಿದ್ದರಂತೆ. ಈಗ ಅದೇ ಬಾಬಾ ಸಹಗಲ್ ಹಾಡಿಗೆ ಅವರ ಜೊತೆಗೆ ನರ್ತಿಸುವ ಅವಕಾಶ ಎಂದು ಸಂತೋಷ ಪಡುತ್ತಿದ್ದಾರೆ.
ಇನ್ನೊಂದು ವಿಷಯ, ಓಂ ಪ್ರಕಾಶ್ರಾವ್ ಅವರ ಹುಲಿ ಚಿತ್ರಕ್ಕೆ ಆಯ್ಕೆಯಾಗಿದ್ದ ನೀತೂ ಆಮೇಲೆ ಚಿತ್ರವನ್ನು ನಿರಾಕರಿಸಿದರಂತೆ. ಅದಕ್ಕೆ ಕಾರಣ. ಅತಿಯಾದ ಗ್ಲಾಮರ್!