ಅಂತೂ ಪ್ರೇಮಿಸಂಗೆ ಸೆನ್ಸಾರ್ ಮಂಡಳಿ ಗ್ರೀನ್ ಸಿಗ್ನಲ್ ನೀಡಿದೆ. ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯು ಪ್ರಮಾಣ ಪತ್ರ ನೀಡಿದೆ.
ಇದರಿಂದ ಹರ್ಷಗೊಂಡಿರುವ ನಿರ್ಮಾಪಕ ಅಜಯ್ ಆರ್. ಗೌಡ ಶೀಘ್ರದಲ್ಲಿ ಚಿತ್ರ ಬಿಡುಗಡೆಗೆ ಸಿದ್ಧತೆ ನಡೆಸಿದ್ದಾರೆ. ಚಿತ್ರಕ್ಕೆ ರತ್ನಜ ಕಥೆ, ಚಿತ್ರಕಥೆ ಬರೆದು ಚಿತ್ರವನ್ನು ನಿರ್ದೇಶಿಸಿದ್ದಾರೆ. ಪ್ರೀತಿಸುವವರು, ಪ್ರೀತಿಸಲೇಬೇಕಾದವರು, ಪ್ರೀತಿಸುವವರಿಗಾಗಿ ಎಂಬ ಪರಿಕಲ್ಪನೆಯಲ್ಲಿ ಈ ಚಿತ್ರ ಮೂಡಿ ಬಂದಿದೆ.
ಚಿತ್ರದಲ್ಲಿ ಅಮೂಲ್ಯ ನಾಯಕಿ. ನಾಯಕರಾಗಿ ಚೇತನ್ ಹಾಗೂ ಕೊಡಗಿನ ಹುಡುಗ ವರುಣ್ ನಾಯಕ. ಹಂಸಲೇಖ ಅವರು ಈ ಚಿತ್ರಕ್ಕೆ ಗೀತರಚನೆ ಮಾಡಿ ಸಂಗೀತ ಸಂಯೋಜಿಸಿದ್ದಾರೆ. ಉಳಿದಂತೆ ತಾರಾಬಳಗದಲ್ಲಿ ಅನಂತನಾಗ್, ಅವಿನಾಶ್, ರೇಖಾ ಮೊದಲಾದವರಿದ್ದಾರೆ.