ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಉಫ್!! ಈ ಚಿತ್ರಗಳೆಲ್ಲ ಹೊರಬರೋದು ಯಾವಾಗ? (Bhimus Bang Bang Kids | Teertha | Ullasa Uthsaha | Thipparalli tharalegalu)
ಸುದ್ದಿ/ಗಾಸಿಪ್
Bookmark and Share Feedback Print
 
MOKSHA
ಅಂತೂ ಕನ್ನಡದ ಹಲವು ಚಿತ್ರಗಳಿಗೆ ಇದೀಗ ಮುಕ್ತಿ ಸಿಗುವ ಲಕ್ಷಣಗಳು ಕಾಣಿಸುತ್ತಿವೆ. ಹಲವು ಕಾರಣಗಳಿಂದ ಬಿಡುಗಡೆವರೆಗೆ ಬಂದು ಕುಳಿತಿದ್ದ ಚಿತ್ರಗಳು ಈಗ ಮೈ ಕೊಡವಿ ಎದ್ದು ನಿಂತಿದೆ.

ಎಸ್.ವಿ. ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ ತಿಪ್ಪಾರಳ್ಳಿಯ ತರಲೆಗಳು ಚಿತ್ರ ವರ್ಷಗಳ ಹಿಂದೆಯೇ ತೆರೆ ಕಾಣಬೇಕಾಗಿತ್ತು. ಇದರಲ್ಲಿ ರೆಬಲ್ ಸ್ಟಾರ್ ಅಂಬರೀಷ್, ಎಸ್. ನಾರಾಯಣ್, ಕೋಮಲ್, ಓಂ ಪ್ರಕಾಶ್ ರಾವ್ ಮೊದಲಾದವರ ತಾರಾಗಣವಿದ್ದು, ಈಗ ತೆರೆ ಕಾಣುವ ಎಲ್ಲಾ ಲಕ್ಷಣಗಳು ಕಾಣುತ್ತಿದೆ.

MOKSHA
ಇವರದೇ ನಿರ್ದೇಶನದ ಉಪೇಂದ್ರ ಮತ್ತು ರಮ್ಯಾ ಅಭಿನಯದ ಇನ್ನೊಂದು ಚಿತ್ರ ಭೀಮೂಸ್ ಬ್ಯಾಂಗ್ ಬ್ಯಾಂಗ್ ಕಿಡ್ಸ್ ಕೂಡ ಮತ್ತೆ ತೆರೆಕಾಣುವ ಉತ್ಸಾಹದಲ್ಲಿವೆ. ಇನ್ನು ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ರಿಮೇಕ್ ಚಿತ್ರ ಉಲ್ಲಾಸ ಉತ್ಸಾಹ ಕಳೆದ ವರ್ಷ ಮಾರ್ಚ್ ಹೊತ್ತಿಗೆ ತೆರೆ ಕಾಣಬೇಕಾಗಿತ್ತು. ಆದರೆ ಈಗ ಅದಕ್ಕೆ ಮುಹೂರ್ತ ಬಂದಿದೆ.

ಇದರ ಜೊತೆಗೆ ಪ್ರಜ್ವಲ್ ದೇವರಾಜ್ ಅವರ ನನ್ನವನು, ದರ್ಶನ್ ಅಭಿನಯದ ಬಾಸ್, ಸುದೀಪ್ ನಟಿಸಿರುವ ಮಿ. ತೀರ್ಥ ಸೇರಿದಂತೆ ಹಲವು ಚಿತ್ರಗಳು ಬಿಡುಗಡೆಗೆ ಮೀನ ಮೇಷ ಎಣಿಸುತ್ತಿದೆ. ಯಾವಾಗ ಬಿಡುಗಡೆಯ ಭಾಗ್ಯ ಕಾಣುತ್ತೋ... ದೇವನೇ ಬಲ್ಲ.

ಉಲ್ಲಾಸ ಉತ್ಸಾಹ ಚಿತ್ರದ ಫೋಟೋಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

ಭೀಮೂಸ್ ಬ್ಯಾಂಗ್ ಬ್ಯಾಂಗ್ ಕಿಡ್ಸ್ ಚಿತ್ರದ ಫೋಟೋಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಭೀಮೂಸ್ ಬ್ಯಾಂಗ್ ಬ್ಯಾಂಗ್ ಕಿಡ್ಸ್, ತೀರ್ಥ, ಉಲ್ಲಾಸ ಉತ್ಸಾಹ, ತಿಪ್ಪಾರಳ್ಳಿ ತರಲೆಗಳು