ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಆಪ್ತರಕ್ಷಕದ ಸಂಧ್ಯಾಗೆ ಕನ್ನಡ ಚಿತ್ರಗಳಲ್ಲಿ ನಟಿಸುವಾಸೆ! (Sandhya | Kannada films | Aaptha Rakshaka | Nanda | Dr. Vishnuvardhan)
ಸುದ್ದಿ/ಗಾಸಿಪ್
Bookmark and Share Feedback Print
 
WD
ತಮಿಳು ನಟಿ ಸಂಧ್ಯಾಗೆ ಆಪ್ತರಕ್ಷದ ನಂತರ ಇದೀಗ ಹೆಚ್ಚು ಹೆಚ್ಚು ಕನ್ನಡ ಚಿತ್ರಗಳನ್ನು ನಟಿಸುವ ಬಯಕೆಯಾಗಿದೆಯಂತೆ. ಆಪ್ತರಕ್ಷಕದಂತಹ ಉತ್ತಮ ಚಿತ್ರದಲ್ಲಿ ನಟಿಸಿದ ನಂತರ ಸಂಧ್ಯಾ ಇದೀಗ ಕನ್ನಡ ಚಿತ್ರರಂಗದಲ್ಲಿ ನನಗಿನ್ನೂ ಹೆಚ್ಚು ಚಿತ್ರಗಳಲ್ಲಿ ನಟಿಸುವ ಆಸೆಯಿದೆ ಎಂದು ಬಹಿರಂಗವಾಗಿ ಹೇಳಿಕೊಂಡಿದ್ದಾಳೆ.

ಆಪ್ತರಕ್ಷಕ ಚಿತ್ರದ ನಂತರ ನನಗೆ ಕನ್ನಡದಲ್ಲಿ ಸಾಕಷ್ಟು ಆಫರ್ ಬರುತ್ತಿದೆ. ಆದರೆ ನನಗೆ ಉತ್ತಮ ಚಿತ್ರ ಬರಬೇಕೆಂಬ ಆಸೆಯಿದೆ. ಅದಕ್ಕಾಗಿ ಕಾಯುತ್ತೇನೆ. ಆಪ್ತರಕ್ಷಕದ ಮೂಲಕ ಗಳಿಸಿದ ಪ್ರಸಿದ್ಧಿಯನ್ನು ಇನ್ನೊಂದು ಕೆಟ್ಟ ಚಿತ್ರದಲ್ಲಿ ನಟಿಸಿ ಕಳೆದುಕೊಳ್ಳಲು ನನಗಿಷ್ಟವಿಲ್ಲ ಎಂದು ಹೇಳುತ್ತಾರೆ ಸಂಧ್ಯಾ.

ಸಂಧ್ಯಾ ಈ ಹಿಂದೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಜೊತೆಗೆ ನಂದ ಚಿತ್ರದಲ್ಲಿ ಅಭಿನಯಿಸಿದ್ದರು. ಆದರೆ ಅದಕ್ಕೆ ಯಶಸ್ಸು ದಕ್ಕಲಿಲ್ಲ. ಅದಾದ ನಂತರ ಅವಕಾಶ ದಕ್ಕಿದ್ದು ಆಪ್ತರಕ್ಷಕದಲ್ಲಿ. ಆದರೆ ಆಪ್ತರಕ್ಷಕ ನಿರೀಕ್ಷೆಗೂ ಮೀರಿ ಯಶಸ್ಸು ಗಳಿಸುತ್ತಿರುವುದು ನೋಡಿದರೆ ಸಂಧ್ಯಾಗೆ ಆಕಾಶಕ್ಕೆ ಮೂರೇ ಗೇಣು.

ನಾಗವಲ್ಲಿಯ ಪಾತ್ರದಲ್ಲಿ ಆಪ್ತರಕ್ಷಕದಲ್ಲಿ ನಟಿಸಿದ್ದು ನನಗೆ ಮರೆಯಲಾಗದ ನೆನಪು. ಯಾಕೆಂದರೆ ಅದು ಅತ್ಯಂತ ಕಷ್ಟದ ಪಾತ್ರ. ಆದರೆ ನಿರ್ದೇಶಕ ಪಿ.ವಾಸು ಹಾಗೂ ವಿಷ್ಣುವರ್ಧನ್‌ರಂತಹ ಅನುಭವಿ ನಟರು ನನಗೆ ಈ ಪಾತ್ರದಲ್ಲಿ ನಟಿಸಲು ತುಂಬ ಸಹಾಯ ಮಾಡಿದರು. ಮಲಯಾಳಂನಲ್ಲಿ ಶೋಭನಾ, ಕನ್ನಡಲ್ಲಿ ಸೌಂದರ್ಯಾ ಹಾಗೂ ತಮಿಳಿನಲ್ಲಿ ಜ್ಯೋತಿಕಾ ನಿಭಾಯಿಸಿದ್ದ ನಾಗವಲ್ಲಿ ಪಾತ್ರಕ್ಕೆ ಸಾಕಷ್ಟು ಪ್ರಸಿದ್ಧಿ ಬಂದಿತ್ತು. ಹಾಗಾಗಿ ಆ ಪಾತ್ರವನ್ನು ನಾನು ಕಲ್ಪಿಸಿಕೊಳ್ಳಲು ಕೊಂಚ ನನಗೆ ಆರಂಭದಲ್ಲಿ ಕಷ್ಟವಾಗಬಹುದೆಂಬ ಭಯ ಇದ್ದೇ ಇತ್ತು. ಆಧರೆ ವಿಷ್ಣುವರ್ಧನ್ ನನಗೆ ತುಂಬ ಸಹಾಯ ಮಾಡಿದರು. ಹಾಗಾಗಿ ನಾನು ಆ ಪಾತ್ರದಲ್ಲಿ ನಟಿಸಲು ಸುಲಭವಾಯಿತು. ಇದಕ್ಕಾಗಿ ನಾನು ವಿಷ್ಣುವರ್ಧನ್ ಹಾಗೂ ವಾಸು ಅವರಿಗೆ ಧನ್ಯವಾದ ಹೇಳಲೇಬೇಕು ಎನ್ನುತ್ತಾರೆ ಸಂದ್ಯಾ.

ಈ ಹಿಂದೆ ಕಾದಲ್ ಸಂಧ್ಯಾ ಎಂದೇ ಪ್ರಸಿದ್ಧಿ ಪಡೆದಿದ್ದ ಸಂಧ್ಯಾ ಈಗ ಆಪ್ತರಕ್ಷಕದ ಸಂಧ್ಯಾ ಎಂದು ಕರೆಸಿಕೊಳ್ಳುವಷ್ಟು ಪ್ರಸಿದ್ಧಿ ಬಂದಿರುವುದು ಆಕೆಗೆ ತುಂಬ ಖುಷಿಯಾಗಿದೆಯಂತೆ. ಹಾಗಾಗಿ ಕನ್ನಡಕ್ಕೆ ಜೈ ಅಂತಿದ್ದಾಳೆ ಸಂಧ್ಯಾ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಕನ್ನಡ ಸಿನಿಮಾ, ಸಂಧ್ಯಾ, ಕಾದಲ್, ಆಪ್ತರಕ್ಷಕ, ಪಿವಾಸು