ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಪರಿಸರ ಪರ ಕಾಳಜಿಯ ಚಿತ್ರ ಈ ತರಂಗಿಣಿ (Tharangini | Yaradu | Thejaswini | Mohan)
ಸುದ್ದಿ/ಗಾಸಿಪ್
Bookmark and Share Feedback Print
 
MOKSHA
ಕಾದಂಬರಿ ಆಧಾರಿತ ಚಿತ್ರವೊಂದನ್ನು ಕಮರ್ಷಿಯಲ್ ರೀತಿಯಲ್ಲಿ ಪ್ರೇಕ್ಷಕರಿಗೆ ತೋರಿಸಬೇಕೆಂದರೆ ಅದು ನಿಜಕ್ಕೂ ಕಷ್ಟದ ಮಾತು. ಮೂಲಕ ಕಥೆಗೆ ಎಲ್ಲಿಯೂ ಮೋಸವಾಗದಂತೆ ಚಿತ್ರವನ್ನು ನಿರ್ದೇಶಿಸಬೇಕು. ಹಾಗಾಂತ ಕನ್ನಡ ಚಿತ್ರರಂಗಕ್ಕೆ ಇದೇನು ಹೊಸ ಕೆಲಸವಲ್ಲ. ಈ ಹಿಂದೆ ಎಷ್ಟೋ ಚಿತ್ರಗಳು ಕಾದಂಬರಿ ಆಧಾರಿತ ಚಿತ್ರಗಳು ತೆರೆಗೆ ಬಂದಿದ್ದರೂ, ಇತ್ತೀಚಿನ ದಿನಗಳಲ್ಲಿ ಕೊಂಚ ಕಡಿಮೆ ಎಂದರೆ ತಪ್ಪಲ್ಲ.

ಈಗ ಅಪರೂಪವೆಂಬಂತೆ, ಕಾದಂಬರಿ ಆಧಾರಿತ ಚಿತ್ರವೊಂದು ಹೊರಬರುತ್ತಿದೆ. ಆ ಚಿತ್ರ ತರಂಗಿಣಿ. ಇದು 1992ರಲ್ಲಿ ಪ್ರಕಟವಾದ ಉಷಾ ನವರತ್ನರಾವ್ ಅವರ ನೀನ್ಯಾರಿಗಾದೆಯೋ ಕಾದಂಬರಿ ಆಧಾರಿತ. ಕೈಗಾರೀಕರಣ ಎಂಬ ಭೂತ ನಿಸರ್ಗದ ಮೇಲೆ ಸಮರ ಸಾರಿದಾಗ ಉಂಟಾಗುವ ತಳಮಳಗಳನ್ನು ನವಿರಾಗಿ ಕಾದಂಬರಿ ಮೂಲಕ ಉಷಾ ಚಿತ್ರಿಸಿದ್ದರು. ಈಗ ಅದೇ ಕಥೆಗೆ ಸಿನಿಮಾ ರೂಪ ಕೊಟ್ಟು ಈಗಿನ ಕಾಲಕ್ಕೆ ಸರಿಹೊಂದಿಸಿದ್ದಾರೆ ಶ್ರೀನಿವಾಸ್ ಕೌಶಿಕ್.

ಇವರು ಈ ಹಿಂದೆ ಲೀಲಾವತಿ ಬ್ಯಾನರ್‌ನಲ್ಲಿ ಹೊರಬಂದ 'ಯಾರದು?' ಚಿತ್ರದ ನಿರ್ದೇಶಕರು. ಚಿತ್ರಕ್ಕೆ ಮೋಹನ್ ನಾಯಕ. ಪರಿಸರ ಸ್ನೇಹಿಯ ಪಾತ್ರ. ಹಾಸ್ಯ ಚಿತ್ರಕ್ಕೆ ಹೆಸರುವಾಸಿಯಾಗಿದ್ದ ಮೋಹನ್ ಮೊದಲ ಬಾರಿಗೆ ಹೀಗೊಂದು ಗಂಭೀರ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನಾಯಕಿಯ ಪಾತ್ರವನ್ನು ತೇಜಸ್ವಿನಿ ಮಾಡುತ್ತಿದ್ದಾರೆ. ಇಲ್ಲಿ ಈಕೆ ಪತ್ರಕರ್ತೆ.

ಈಗಾಗಲೇ ಚಿತ್ರೀಕರಣ ಬಹುತೇಕ ಮುಕ್ತಾಯಗೊಂಡಿದೆ. ಕಾದಂಬರಿ ಆಧಾರಿತ ಚಿತ್ರವನ್ನು ಕಮರ್ಷಿಯಲ್ ಆಗಿ ತೋರಿಸುತ್ತಿರುವ ಕೌಶಿಕ್ ಸಾಹಸಕ್ಕೆ ಗಾಂಧಿನಗರದ ಮಂದಿ ಏನೂ ಹೇಳುತ್ತಾರೋ ಕಾದು ನೋಡಬೇಕು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ತರಂಗಿಣಿ, ಯಾರದು, ತೇಜಸ್ವಿನಿ, ಮೋಹನ್