ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಕನ್ನಡಕ್ಕೆ ಮತ್ತೆ ಬರಲ್ಲ ಅಂತ ಅಂದ್ಕೊಂಡ್ರೂ ಬಂದೆ: ಸದಾ! (Mylari | Shivrajkumar | Sada | sandalwood)
ಸುದ್ದಿ/ಗಾಸಿಪ್
Bookmark and Share Feedback Print
 
IFM
ಸದಾ ಮತ್ತೆ ಕನ್ನಡಕ್ಕೆ ಬಂದಿರೋದು ಗೊತ್ತೇ ಇದೆ. ಆದ್ರೆ ಸದಾ, ಮೋಹಿನಿ ಚಿತ್ರದಲ್ಲಿ ನಟಿಸಿದ ನಂತರ ಕನ್ನಡ ಚಿತ್ರರಂಗದತ್ತ ಇನ್ಯಾವತ್ತೂ ತಲೆ ಹಾಕಲಾರೆ ಅಂದುಕೊಂಡಿದ್ದ ವಿಷಯ ಗೊತ್ತಾ? ಹೌದು. ಸದಾ ಅಂದೊಮ್ಮೆ, ನಾನು ಇನ್ಯಾವತ್ತೂ ಕನ್ನಡದತ್ತ ಮುಖ ಮಾಡಲ್ಲ ಅಂದುಕೊಂಡಿದ್ದರಂತೆ. ಅರು ಹಾಗೆ ನಿರ್ಧಾರ ಕೈಗೊಳ್ಳಲು ಕಾರಣವೂ ಇತ್ತು. ಅದು ಮೋಹಿನಿ!

ಮೊನಾಲಿಸಾ ಚಿತ್ರದಲ್ಲಿ ದಕ್ಕಿದ ಪ್ರಸಿದ್ಧಿಯ ನಂತರ ಮತ್ತೆ ಸದಾ ಮೋಹಿನಿ ಚಿತ್ರದಲ್ಲಿ ನಟಿಸಿದರು. ಆದರೆ ಮೋಹಿನಿ ಚಿತ್ರದ ಸೆಟ್‌ನಲ್ಲಿ ಅತಿ ಕೆಟ್ಟ ಅನುಭವವಾದ ನಂತರ ಕನ್ನಡ ಚಿತ್ರಗಳಲ್ಲಿ ಇನ್ನು ಮುಂದೆ ನಟಿಸುವುದಿಲ್ಲ ಎಂದು ತೀರ್ಮಾನಿಸಿದರಂತೆ. ಈ ಕುರಿತು ಸದಾ ಹೇಳೋದು ಹೀಗೆ, ಮೋಹಿನಿಯಲ್ಲಿ ಕೆಟ್ಟ ಅನುಭವವಾಯ್ತು. ತುಂಬ ಬೇಸರವಾಯ್ತು. ಕೇವಲ ಒಂದು ಚಿತ್ರದ ಕೆಟ್ಟ ಪ್ರೊಡಕ್ಷನ್ ಯುನಿಟ್ ಕಾರಣಕ್ಕಾಗಿ ಇಡೀ ಸ್ಯಾಂಡಲ್‌ವುಡ್‌ನತ್ತ ಕೋಪ ಮಾಡಿಕೊಳ್ಳಬೇಡಿ ಅಂತ ಹಲವರು ಹೇಳಿದರು. ಅದಕ್ಕಾಗಿ ಮುಂದೆ ಉತ್ತಮ ಅವಕಾಶ ಬಂದರೆ ಒಪ್ಪಿಕೊಳ್ಳುವ ತೀರ್ಮಾನ ಮಾಡಿದೆ ಎನ್ನುತ್ತಾರೆ ಸದಾ.

ನಾನು ಪ್ರೇಮಕಥೆಯಿರುವ ಚಿತ್ರದಲ್ಲಿ ಅಭಿನಯಿಸಿ ತುಂಬಾ ದಿನಗಳಾಯ್ತು. ಅದೇ ಸಮಯಕ್ಕೆ ಸರಿಯಾಗಿ ಮೈಲಾರಿ ಚಿತ್ರದಿಂದ ಆಫ್ ಬಂತು. ಉತ್ತಮ ಚಿತ್ರಕಥೆ ಹೊಂದಿತ್ತು. ಪ್ರೇಮಕಥಾನಕ. ಜೊತೆಗೆ ಈ ಚಿತ್ರದಲ್ಲಿ ನನ್ನ ಅಭಿನಯಕ್ಕೆ ಸಾಕಷ್ಟು ಅವಕಾಶವಿದೆ. ಹಾಗಾಗಿ ಒಂದೇ ಮಾತಿಗೆ ಎಸ್ ಎಂದೆ. ಹಾಗಾಗಿ ನಾನೀಗ ಶಿವಣ್ಣ ಜೊತೆ ನಟಿಸುತ್ತಿದ್ದೇನೆ ಎಂದರು ಸದಾ.

ಹಾಗಾದರೆ ಬೇರೆ ಕನ್ನಡ ಚಿತ್ರಗಳಿಂದ ಆಫರ್ ಬರಲೇ ಇಲ್ವಾ ಅಂದರೆ ಸದಾ, ಬಂದಿತ್ತು. ನಿರ್ದೇಶಕ ಶಶಾಂಕ್ ಅವರಿಂದ ಒಂದು ಚಿತ್ರದ ಆಫರ್ ಬಂದಿತ್ತು. ಅದೇ ಸಮಯಕ್ಕೆ ಮೈಲಾರಿ ಚಿತ್ರದ ಆಫರ್ ಕೂಡಾ ಬಂತು. ಶಶಾಂಕ್ ಚಿತ್ರದ ಚಿತ್ರಕಥೆಯೂ ತುಂಬ ಚೆನ್ನಾಗಿತ್ತು. ಆದರೆ ಅದರಲ್ಲಿ ನನ್ನ ಪಾತ್ರ ಕೊಂಚ ನೆಗೆಟಿವ್ ಶೇಡ್ ಹೊಂದಿದೆ. ಆ ಚಿತ್ರದ ಬಗ್ಗೆಯೂ ಆಸಕ್ತಿಯಿತ್ತು. ಆದರೆ ಅದ್ಯಾಕೋ ವರ್ಕೌಟ್ ಆಗಲಿಲ್ಲ. ಕೊನೆಗೆ ಮೈಲಾರಿಗೆ ಒಪ್ಪಿದೆ ಎನ್ನುತ್ತಾರೆ.

ಇದಲ್ಲದೆ ಸದಾಗೆ ಆಪ್ತರಕ್ಷಕ ಚಿತ್ರಕ್ಕಾಗಿ ಪಿ. ವಾಸು ಅವರಿಂದಲೂ ಆಫರ್ ಬಂದಿತ್ತಂತೆ. ಛೇ, ಆ ಅವಕಾಶ ಮಿಸ್ ಆಯಿತು ಎನ್ನುವಾಗ ಸದಾ ಅವರಲ್ಲಿ ಬೇಸರ ಇಣುಕುತ್ತದೆ. ಆಪ್ತರಕ್ಷಕದ ಆಫರ್ ಕೇವಲ ಸಂವಹನದ ಕೊರತೆಯಿಂದಾಗಿ ಕೈತಪ್ಪಿತು. ಆದರೆ ಕೆಲದಿನಗಳ ನಂತರ ನಾನು ವಾಸು ಅರಿಗೆ ಫೋನ್ ಮಾಡಿದಾಗ, ಅವರಿಗಾಗಲೇ ಚಿತ್ರದ ಶೂಟಿಂಗ್ ಆರಂಭಿಸಿಯಾಗಿತ್ತು. ನಾನು ಪಿ.ವಾಸು ಅವರ ದೊಡ್ಡ ಅಭಿಮಾನಿ. ಅವರು ತಮ್ಮ ಚಿತ್ರಗಳ ನಾಯಕಿಯರಿಗೆ ನೀಡುವ ಗೌರವ, ನಡೆಸಿಕೊಳ್ಳುವ ರೀತಿ ನನಗೆ ತುಂಬಾ ಇಷ್ಟವಾಗುತ್ತದೆ ಎನ್ನುತ್ತಾರೆ ಸದಾ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಸದಾ, ಮೈಲಾರಿ, ಶಿವರಾಜ್ ಕುಮಾರ್, ಆರ್ಚಂದ್ರು