'ಕಾರ್ತಿಕ್'. ಇದು ಅಪ್ಪಟ ಅನಿವಾಸಿ ಕನ್ನಡಿಗರ ಚಿತ್ರ. ಅರ್ಥಾತ್ ಮುಂಬಯಿಯಲ್ಲಿ ನೆಲೆಸಿರುವ ಕನ್ನಡಿಗರು ಒಟ್ಟಾಗಿ ಸೇರಿ ಮಾಡುತ್ತಿರುವ ಚಿತ್ರ ಇದಾಗಿದೆ.
ಚಿತ್ರದ ಸಂಗೀತ ನಿರ್ದೇಶಕ ಜಾನ್ ಅವರನ್ನು ಹೊರತುಪಡಿಸಿ, ನಿರ್ದೇಶಕರಿಂದ ಹಿಡಿದು ಕ್ಯಾಮರಾಮನ್‌ವರೆಗೆ ಎಲ್ಲರೂ ಕನ್ನಡಿಗರೇ. ಜೊತೆಗೆ ಎಲ್ಲರೂ ಅಪ್ಪಟ ಕನ್ನಡ ಅಭಿಮಾನಿಗಳು. ಯುವ ಚಿತ್ರದಲ್ಲಿ ಭೂಮಿಯಿಂದ ಮೇಲೆ ಮೈ ನವಿರೇಳಿಸುವ ಸಾಹಸ ದೃಶ್ಯಗಳನ್ನು ಮಾಡಿ ಎಲ್ಲರ ಮೆಚ್ಚುಗೆ ಗಳಿಸಿದ್ದ ನಾಯಕ ಕಾರ್ತಿಕ್ ಇಲ್ಲಿ ನಾಯಕ.
ಕಾರ್ತಿಕ್‌ಗೆ ಈಗಾಗಲೇ ಮರಾಠಿಯಲ್ಲಿ ನಾಲ್ಕೈದು ಚಿತ್ರ ಮಾಡಿದ ಅನುಭವ ಇದೆ. ಚಿತ್ರದಲ್ಲಿ ಐದು ಆಕ್ಷನ್ ದೃಶ್ಯಗಳಿವೆ. ಸಿಂಗಾಪುರದಲ್ಲಿ ಎರಡೂವರೆ ತಿಂಗಳ ಕಾಲ ಮಾರ್ಷಲ್ ಆರ್ಟ್ಸ್ ತರಬೇತಿಯನ್ನು ಪಡೆದಿದ್ದಾರೆ ಕಾರ್ತಿಕ್. ಚಿತ್ರಕ್ಕೆ ಸರ್ಕಸ್ ಚಿತ್ರದ ನಾಯಕಿ ಸರ್ಕಸ್ ಚಿತ್ರದಲ್ಲಿ ಅಭಿನಯಿಸಿದ ಅರ್ಚನಾ ಗುಪ್ತಾ ನಾಯಕಿ. ಇದೊಂದು ಸರಳ ಪ್ರೇಮಕಥೆ. ಚಿತ್ರದಲ್ಲಿ ಮಳೆಯಾಳಂ ಚಿತ್ರಕ್ಕೆ ನೀಡಿದ ಸಂಗೀತಕ್ಕೆ ಎರಡು ರಾಷ್ಟ್ತ್ರೀಐ ಪುರಸ್ಕಾರಗಳನ್ನು ಪಡೆದ ಜಾನ್ ಈ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ. ಈಗಾಗಲೇ ಚಿತ್ರಕ್ಕೆ ಮುಹೂರ್ತ ನಡೆದಿದೆ. ಅನಿವಾಸಿ ಕನ್ನಡಿಗರ ಚಿತ್ರವನ್ನು ಪ್ರೇಕ್ಷಕರು ಹೇಗೆ ಸ್ವೀಕರಿಸುತ್ತಾರೋ ಕಾದು ನೋಡಬೇಕು.