ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಜೀವನದ ಕಟು ಸತ್ಯ ಮಳೆ ಹನಿಯಾದಾಗ..! (Mayadantha Male | Nagakiran | Bhavana Rao | Roopika)
ಸುದ್ದಿ/ಗಾಸಿಪ್
Bookmark and Share Feedback Print
 
MOKSHA
ಜೀವನದಲ್ಲಿ ನಾವು ಯಾರನ್ನು ಹೆಚ್ಚಾಗಿ ಪ್ರೀತಿಸುತ್ತೇವೆಯೋ ಅವರು ನಮ್ಮಿಂದ ದೂರವಾದಾಗ ಹೆಚ್ಚು ನೋವಾಗುತ್ತದೆ. ಇಂತಹ ಕಟು ಸತ್ಯವನ್ನು ಹಾಸ್ಯದ ರೂಪದಲ್ಲಿ ಹೇಳುವ ಪ್ರಯತ್ನದಲ್ಲಿದ್ದಾರೆ ವೀರೇಶ್ ದೊಡ್ಡಬಳ್ಳಾಪುರ.

ಇಂತಹ ಜೀವನದ ಫಿಲಾಸಫಿಯನ್ನು ಹೇಳ ಹೊರಟಿದ್ದು ಮಾಯದಂಥ ಮಳೆ ಚಿತ್ರದ ಮೂಲಕ. ಇದೇ ಮೊದಲ ಬಾರಿಗೆ ನಿರ್ದೇಶನಕ್ಕೆ ಕೈ ಹಾಕಿರುವ ವೀರೇಶ್, ಈ ಮೊದಲು ಚಿತ್ರರಂಗದ ಹಲವು ನಿರ್ದೇಶಕರಿಗೆ ಸಹಾಯಕರಾಗಿ ಕೆಲಸ ಮಾಡಿ ಹಲವಾರು ಚಿತ್ರಗಳಿಗೆ ಸಂಭಾಷಣೆ ರಚಿಸಿದ ಅನುಭವವಿದೆ.

ಮಳೆ ಅದ್ಬುತಗಳನ್ನು ಸೃಷ್ಟಿಸುತ್ತದೆ. ಜೀವನದಲ್ಲಿ ಎಷ್ಟೇ ಕಷ್ಟ ಬಂದರೂ ಮಳೆ ಸಂತಸ ತಂದು ಕೊಡುತ್ತದೆ ಎಂಬ ಅಂಶವನ್ನಾಧರಿಸಿ ಚಿತ್ರ ನಿರ್ದೇಶಿಸಿದ್ದಾರೆ. ನಿರ್ಮಾಪಕರಾಗಿ ಇವರ ಆತ್ಮೀಯರಾದ ಬದರಿ ಇದ್ದಾರೆ. ನಿರ್ದೇಶಕರು ಹತ್ತು ಚಿತ್ರಗಳನ್ನು ಮಾಡಲು ಹೊರಟಿದ್ದಾರೆ. ಮೊದಲ ಚಿತ್ರ ಸಕ್ಸಸ್ ಆದರೆ ಇನ್ನು ಹತ್ತು ಚಿತ್ರ ಮಾಡುತ್ತೇನೆ ಎನ್ನುತ್ತಾರೆ ಬದರಿ!

ಚಿತ್ರದಲ್ಲಿ ನಾಗಕಿರಣ್ ನಾಯಕ. ಜೊತೆಗೆ ಮತ್ತೊಬ್ಬ ನಾಯಕನಾಗಿ ರವಿಚೇತನ್ ಅಭಿನಯಿಸುತ್ತಿದ್ದಾರೆ. ಗಾಳಿಪಟ ಚಿತ್ರದ ಭಾವನಾ ರಾವ್ ಮತ್ತು ಚೆಲುವಿನ ಚಿಲಿಪಿಲಿಯ ರೂಪಿಕಾ ನಾಯಕಿಯರು. ಪೋಷಕ ಪಾತ್ರದಲ್ಲಿ ಶರತ್ ಬಾಬು, ಶೃತಿ ನಟಿಸುತ್ತಿದ್ದಾರೆ.

ಮುಂಗಾರು ಮಳೆಯ ನಂತರ ಈಗಾಗಲೇ ಕನ್ನಡ ಚಿತ್ರರಂಗದಲ್ಲಿ ಬೇಕಾದಷ್ಟು ಮಳೆ ಸುರಿದಿದೆ. ಆದರೆ ಪ್ರೇಕ್ಷಕನಿಗೆ ಮಾತ್ರ ಯಾವ ಮಳೆಯನ್ನು ಸ್ವೀಕರಿಸಬೇಕು ಎಂಬುದು ಸರಿಯಾಗಿ ಗೊತ್ತಿದ್ದಂತಿದೆ. ಮಳೆ ಹೆಚ್ಚಾಗಿ ಚಿತ್ರರಂಗದಲ್ಲಿ ಪ್ರವಾಹ ಬಾರದಿದ್ದರೆ ಸಾಕು!!!
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಮಾಯದಂಥ ಮಳೆ, ನಾಗಕಿರಣ್, ಭಾವನಾ ರಾವ್, ರೂಪಿಕಾ