ಕನ್ನಡದ ಹೆಮ್ಮೆಯ, ದಾದಾ ಸಾಹೇಬ ಫಾಲ್ಕೆ ಪುರಸ್ಕೃತ ವರನಟ ಡಾ.ರಾಜ್ ಕುಮಾರ್ ಅವರ ಜೀವನದ ಕುರಿತ ಪುಸ್ತಕ ಬರುವ ಏ.24ರಂದು ಬಿಡುಗಡೆಯಾಗಲಿದೆ.
ಡಾ.ರಾಜ್ ಕುರಿತ ಈ ಪುಸ್ತಕದಲ್ಲಿ ಶೇ.70ರಷ್ಟು ಡಾ.ರಾಜ್ ಜೀವನದ ಅಪರೂಪದ ಫೋಟೋಗಳು ಸ್ಥಾನ ಪಡೆದಿವೆ. ಶೇ.30ರಷ್ಟು ಮಾಹಿತಿಗಳು ಇಂಗ್ಲೀಷ್ ಬಾಷೆಯಲ್ಲಿವೆ. ಅಣ್ಣಾವ್ರ ಜೀವನದ ಪ್ರಮುಖ ಹಂತಗಳ ಹಳೆಯ ಸಂಗ್ರಹಯೋಗ್ಯವಾದ 2500ಕ್ಕೂ ಹೆಚ್ಚು ಮಹತ್ವಪೂರ್ಣ ಫೋಟೋಗಳು ಈ ಪುಸ್ತಕದಲ್ಲಿ ಸ್ಥಾನ ಪಡೆದಿರುವುದು ವಿಶೇಷ.
ಈ ಪುಸ್ತಕ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾರಾಟ ಕಾಣಲು ಸಾಕಷ್ಟು ತಯಾರಿ ನಡೆಸಲಾಗಿದೆ. ಅಲ್ಲದೆ, ಟೈಮ್ಸ್ ಗ್ರೂಪ್ ಸಂಸ್ಥೆ ಈ ಪುಸ್ತಕದ ಮಾರುಕಟ್ಟೆ ವ್ಯವಹಾರವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿರುವುದರಿಂದ ಅಂತಾರಾಷ್ಟ್ರೀಯ ಮಾರುಕಟ್ಟೆ ಕುದುರುವ ಸಾಧ್ಯತೆಯನ್ನು ಅಲ್ಲಗಳೆಯಲಾಗುವುದಿಲ್ಲ.
ಬೃಹತ್ ಪುಸ್ತಕ ಇದಗಿದ್ದು, ಬೆಲೆ ಇನ್ನೂ ನಿಗದಿಯಾಗಿಲ್ಲ. ಆದರೆ 2,500 ರೂಪಾಯಿಗಳಾಗಿರುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.