ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಡಾ|ವಿಷ್ಣುವರ್ಧನ್‌ಗೆ ಸ್ಮಾರಕ: ಇದು ಆಪ್ತರಕ್ಷಕ ಚಿತ್ರದ ಗಿಫ್ಟ್! (Dr Vishnuvardhan | Aptharakshaka | Krishnaprajwal)
ಸುದ್ದಿ/ಗಾಸಿಪ್
Bookmark and Share Feedback Print
 
MOKSHA
ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರಿಗೆ ದೇವಾಲಯವೊಂದು ನಿರ್ಮಾಣವಾಗಲಿದೆ. ಕೆಂಗೇರಿಯ ಅಭಿಮಾನ್ ಸ್ಟುಡಿಯೋದಲ್ಲಿ ಈ ದೇವಾಲಯ ನಿರ್ಮಾಣವಾಗಲಿದೆ. ಆಪ್ತರಕ್ಷಕ ಚಿತ್ರದ ನಿರ್ಮಾಪಕ ಕೃಷ್ಣಪ್ರಜ್ವಲ್ ಈ ದೇವಾಲಯ ನಿರ್ಮಿಸಲು ತೀರ್ಮಾನಿಸಿದ್ದು, ಸಂಪೂರ್ಣ ಹಣದ ವ್ಯವಹಾರವನ್ನು ಅವರೇ ನೋಡಿಕೊಳ್ಳಲಿದ್ದಾರೆ.

ಅಭಿಮಾನ್ ಸ್ಟುಡಿಯೋದ ಆವರಣದಲ್ಲಿ ವಿಷ್ಣುವರ್ಧನ್ ಅವರ ಕಂಚಿನ ಪುತ್ಥಳಿಯನ್ನು ನಿರ್ಮಿಸಿ ಸ್ಥಾಪಿಸುವುದು ಕೃಷ್ಣಪ್ರಜ್ವಲ್ ಅವರ ಉದ್ದೇಶ. ವಿಷ್ಣುವರ್ಧನ್ ಅರಷ್ಟೇ ಎತ್ತರವಿರುವ ಕಂಚಿನ ಪುತ್ಥಳಿ ಮುಂದಿನ ಡಿ.30ರ ವಿಷ್ಣುವರ್ಧನರ ಮೊದಲ ಪುಣ್ಯಸ್ಮರಣೆಯ ದಿನ ಸ್ಥಾಪಿಸಲು ಉದ್ದೇಶಿಸಲಾಗಿದೆ. ಈ ಪುತ್ಥಳಿಗೆ ಕೋಟಿಗಟ್ಟಲೆ ರೂಪಾಯಿಗಳು ಖರ್ಚಾಗಲಿದ್ದು, ಅದೆಲ್ಲವನ್ನೂ ಕೃಷ್ಣಪ್ರಜ್ವಲ್ ಅವರೇ ಉಸ್ತುವಾರಿ ವಹಿಸಲಿದ್ದಾರೆ ಎನ್ನಲಾಗಿದೆ.

ವಿಷ್ಣುವರ್ಧನ್ ಅಭಿನಯದ ಆಪ್ತರಕ್ಷಕ ಚಿತ್ರ ಹಿಟ್ ಚಿತ್ರವಾಗಿದ್ದು, ಇನ್ನೂ ಮುನ್ನುಗ್ಗುತ್ತಲೇ ಇದೆ. ಹಾಗಾಗಿ ಅವರ ನೆನಪಿಗೆ ಈ ಪುತ್ಥಳಿಯ ಸ್ಮಾರಕ ನಿರ್ಮಿಸುವುದು ಅವರ ಗುರಿ ಎನ್ನಲಾಗಿದೆ. ಭಾರತಿ ವಿಷ್ಣುವರ್ಧನ್ ಕೂಡಾ ಇದಕ್ಕೆ ಸಹಮತ ಸೂಚಿಸಿದ್ದಾರೆ. ಆದರೆ ಯುವ ವಿಷ್ಣುವರ್ಧನರ ಸ್ವರೂಪವನ್ನು ಪುತ್ಥಳಿಯಲ್ಲಿ ಬಿಂಬಿಸುವುದೋ, ಅಥವಾ ಇತ್ತೀಚೆಗಿನ ವಿಷ್ಣುವರ್ಧನ್ ರೂಪವ್ನನು ಕೆತ್ತುವುದೋ ಎಂಬ ತೀರ್ಮಾನ ಇನ್ನೂ ಅಂತಿಮವಾಗಿಲ್ಲ ಎನ್ನಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಡಾವಿಷ್ಣುವರ್ಧನ್, ಆಪ್ತರಕ್ಷಕ, ಸ್ಮಾರಕ, ಕೃಷ್ಣಪ್ರಜ್ವಲ್