ಕುಮಾರ್ ಗೋವಿಂದ್ ಅವರ ಸತ್ಯ ಬಿಡುಗಡೆಗೆ ಸಿದ್ಧವಾಗಿದೆ. ಚಿತ್ರ ಮುಂದಿನ ವಾರ ತೆರೆ ಕಾಣುತ್ತಿರುವುದಷ್ಟೇ ಅಲ್ಲ. ಈ ಮೂಲಕ ತಮ್ಮದೇ ಆದ ಆಡಿಯೋ ಕಂಪೆನಿಯನ್ನೂ ಮಾರುಕಟ್ಟೆಗೆ ಪರಿಚಯಿಸುತ್ತಿದ್ದಾರೆ ಕುಮಾರ್ ಗೋವಿಂದ್.
ಎಸ್.ಕೆ. ಮ್ಯೂಸಿಕ್ ಕಂಪೆನಿಯ ಹೆಸರು. ಅದರ ಮಾಲಿಕ ಗೋವಿಂದ್ ಅವರ ಸಹೋದರ. ಅದರಿಂದ ಬರುವ ಲಾಭವನ್ನು ಯಾವುದಾದರೂ ಒಳ್ಳೆಯ ಕೆಲಸಕ್ಕೆ ವಿನಿಯೋಗಿಸುವುದು ಗೋವಿಂದ್ ಅವರ ಉದ್ದೇಶ. ಅಂದ ಹಾಗೆ ಮೂರು ವರ್ಷಗಳ ದೀರ್ಘ ಕಾಲದಲ್ಲಿ ಕುಮಾರ್ ಸತ್ಯ ಚಿತ್ರವನ್ನು ನಿರ್ದೇಶಿಸಿದ್ದಾರೆ. ಎರಡಕ್ಷರದಲ್ಲಿ ಏನೆಲ್ಲಾ ತತ್ವಗಳು ಅಡಗಿವೆ ಎನ್ನುವುದೇ ಸತ್ಯ ಎಂದು ವಿವರಿಸುತ್ತಾರೆ ಕುಮಾರ್ ಗೋವಿಂದ್.
ಚಿತ್ರಕ್ಕೆ ನಾಗೇಂದ್ರ ಪ್ರಸಾದ್ ಹಾಡು ಬರೆದಿದ್ದಾರೆ. ಬದುಕಿನ ತತ್ವಗಳನ್ನು ಒತ್ತೊತ್ತಾಗಿಸಿ ಹಾಡು ಬರೆದುಕೊಡುವಂತೆ ಕುಮಾರ್ ಗೋವಿಂದ್ ಕೇಳಿದ್ದಕ್ಕೆ ಅಚ್ಚುಕಟ್ಟಾಗಿ ಬರೆದುಕೊಟ್ಟಿದ್ದಾರಂತೆ. ಹುಟ್ಟು ಎರಡಕ್ಷರ ಸಾವು ಎರಡಕ್ಷರ ಎಂಬ ಹಾಡು ಎಲ್ಲರಿಗೂ ಇಷ್ಟವಾಗುತ್ತೆ ಎನ್ನುತ್ತಾರೆ ನಾಗೇಂದ್ರ ಪ್ರಸಾದ್. ಅಂದಹಾಗೆ ಇತ್ತೀಚೆಗೆ ಕುಮಾರ್ ಗೋವಿಂದ್ ಸತ್ಯ ಚಿತ್ರ ಆಡಿಯೋ ಬಿಡುಗಡೆ ಮಾಡಿದ್ದಾರೆ. ಚಿತ್ರ ಏನು ಮೋಡಿ ಮಾಡುತ್ತೋ ನೋಡಬೇಕು.