ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ತೇಜಸ್ವಿನಿಯ ನನಸಾದ ಕನಸು! (Tejaswini | Tarangini | Journalist)
ಸುದ್ದಿ/ಗಾಸಿಪ್
Bookmark and Share Feedback Print
 
Tejawini
MOKSHA
ಪತ್ರಕರ್ತೆಯಾಗಬೇಕೆಂಬ ಹಂಬಲದಿಂದ ಹೊರಟ ಹುಡುಗಿ ಈ ಸಿನಿಮಾ ಮೂಲಕ ಪತ್ರಕರ್ತೆಯಾಗ ಹೊರಟಿದ್ದಾರೆ. ಅವರೇ ಕನ್ನಡದ ಹುಡುಗಿ ತೇಜಸ್ವಿನಿ.

ಹೌದು. ಉಷಾ ನವರತ್ನರಾವ್ ಅವರ ಕಾದಂಬರಿ ಆಧಾರಿತ ಚಿತ್ರ ತರಂಗಿಣಿ ಯಲ್ಲಿ ತೇಜಸ್ವಿನಿ ಪತ್ರಕರ್ತೆ. ಫೈಟರ್ ಪ್ರಕಾಶ್ ಅವರ ಮಗಳಾದ ಈಕೆಗೆ ಚಿತ್ರರಂಗವೇನು ಹೊಸದಲ್ಲ. ಜಯನಗರ ನ್ಯಾಷನಲ್ ಕಾಲೇಜಿನಲ್ಲಿ ಪಿಯುಸಿ ಓದುವಾಗಲೇ ಮಸಣದ ಮಕ್ಕಳು ಚಿತ್ರದಲ್ಲಿ ನಟಿಸಿ ಎಸ್ಐಸಿಎ ಪ್ರಶಸ್ತಿ ಬಾಚಿಕೊಂಡ ಬೆಡಗಿ ಈಕೆ. ಆಗಲೇ ಪತ್ರಿಕೋದ್ಯಮದಲ್ಲಿ ಸಾಧನೆ ಮಾಡಬೇಕೆಂದು ಬಯಸಿದರೂ ಯಾಕೋ ಅದರಲ್ಲಿ ಹಣೆಬರಹವಿರಲಿಲ್ಲ.

ಶೈಕ್ಷಣಿಕ ಜೀವನದಲ್ಲೇ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದರಿಂದ ಆಕೆಯ ಪ್ರಿಯವಾದ ಪತ್ರಿಕೋದ್ಯಮಕ್ಕೆ ಸೀಟು ಸಿಗಲಿಲ್ಲ ಎಂಬ ಕಾರಣಕ್ಕಾಗಿ, ಮನಃಶಾಸ್ತ್ರದಲ್ಲಿ ಪದವಿ ಪಡೆದಿದ್ದಾರೆ ತೇಜಸ್ವಿನಿ. ಈಗ ತನ್ನ ಸಿನಿಮಾ ಮೂಲಕ ಪತ್ರಕರ್ತೆಯ ಕನಸು ಈಡೇರುತ್ತಿದೆ. ಗುಡ್‌ಲಕ್ ತೇಜಸ್ವಿನಿ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ತೇಜಸ್ವಿನಿ, ತರಂಗಿಣಿ, ಪತ್ರಿಕೋದ್ಯಮ