ಇನ್ನು ಮುಂದೆ ಮಾಸ್ಟರ್ ಆನಂದ್ ಅಲ್ಲ. ಅವರೀಗ ಮಿಸ್ಟರ್ ಆನಂದ್ ಆಗಿದ್ದಾರೆ. ಮೊನ್ನೆಯ ಗೌರಿ ಗಣೇಶ್ ಚಿತ್ರದ ಲಿಟಲ್ ಸ್ಟಾರ್‌ಗೆ ಈಗ ಮೀಸೆ ಚಿಗುರಿ ಮದುವೆಯಾಗಿದ್ದಾರೆ. ಆ ಮೂಲಕ ಅವರು ಮಿಸ್ಟರ್ ಆನಂದ್ ಆಗಿದ್ದಾರೆ.
ಅವರನ್ನು ಕೈ ಹಿಡಿದಿರುವ ಹುಡುಗಿ ತೇಜಸ್ವಿನಿ. ನಂಜನಗೂಡಿನಲ್ಲಿ ಈಗಷ್ಟೇ ಪದವಿ ಮುಗಿಸಿದ್ದಾರೆ. ಮೊನ್ನೆಯಷ್ಟೇ ನಡೆದ ಆರಕ್ಷತೆ ಸಮಾರಂಭದಲ್ಲಿ ಇಡೀ ಕಿರುತೆರೆ ಲೋಕವೇ ಹಾಜರಿತ್ತು. ಟಿ.ಎನ್. ಸೀತಾರಾಮ್, ಆನಂದ್ ಚಿತ್ರ ಬದುಕಿನ ಗಾಡ್ ಫಾದರ್ ಫಣಿ ರಾಮಚಂದ್ರ, ಕರಿಬಸವಯ್ಯ, ಬ್ಯಾಂಕ್ ಜನಾರ್ದನ್ ಸೇರಿದಂತೆ ಹಲವರು ಬಂದು ಶುಭ ಹಾರೈಸಿದ್ದಾರೆ.
ಅಂದ ಹಾಗೆ, ಒಂದು ಕಾಲದಲ್ಲಿ ಪರದೆ ಮೇಲೆ ಮಿಂಚಿನಂತೆ ಮಾತನಾಡುತ್ತಾ ಬರುತ್ತಿದ್ದರೆ ಜನ ನಾಲಗೆಯಲ್ಲೇ ಸಿಳ್ಳೆ ಹೊಡೆಯುತ್ತಿದ್ದರು. ಅದೇ ಆನಂದ್ ಸದ್ಯ ಕಿರುತೆರೆಯಲ್ಲಿ ಬ್ಯುಸಿಯಾಗಿದ್ದಾರೆ. ಎಸ್ಎಸ್ಎಲ್ಸಿ ನನ್ ಮಕ್ಳು ಧಾರಾವಾಹಿಯಿಂದ ಅಲೆ ಎಬ್ಬಿಸುತ್ತಿದ್ದಾರೆ.
ಏನೇ ಇರಲಿ. ಹೊಸಬಾಳ ಹೊಸ್ತಿಲಲ್ಲಿರುವ ಆನಂದ್ ವೈವಾಹಿಕ ಜೀವನಕ್ಕೆ ಶುಭ ಹಾರೈಸೋಣ ಅಲ್ಲವೇ.