ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » 'ಪೊರ್ಕಿ' ಪ್ರಣೀತಾ ತೆಲುಗಿಗೆ, ಸಿದ್ಧಾರ್ಥ್‌ಗೆ ನಾಯಕಿ! (Porki | Darshan | Praneetha | Siddarth)
ಸುದ್ದಿ/ಗಾಸಿಪ್
Bookmark and Share Feedback Print
 
PR
ಕನ್ನಡದ ಒಂದೆರಡು ಚಿತ್ರಗಳಲ್ಲಿ ಸ್ಟಾರ್ ನಟರ ಜೊತೆ ಕಾಣಿಸಿಕೊಂಡರೆ ಸಾಕು, ಸೀದಾ ನಟಿ ಮಣಿಯರು ಪರಭಾಷಾ ಚಿತ್ರರಂಗದತ್ತ ಮುಖ ಮಾಡುತ್ತಾರೆ. ಅಂದಿನ ಬಹು ಬೇಡಿಕೆಯ ನಟಿಯರು ಎನಿಸಿಕೊಂಡಿದ್ದ ರಮ್ಯ, ರಕ್ಷಿತಾ ಅವರಿಂದ ಆರಂಭಗೊಂಡು ಇಂದಿನ ಹರ್ಷಿತಾ ಪೂಣಚ್ಚ ಕೂಡ ಇದೇ ಹಾದಿಯಲ್ಲಿ ಸಾಗಿದವರು.

ಈಗ ಇವರ ಸಾಲಿಗೆ ಸೇರುತ್ತಿರುವವರು ನಟಿ ಪ್ರಣೀತಾ. ದರ್ಶನ್ ಜೊತೆ ಪೋರ್ಕಿ ಚಿತ್ರದ ಮೂಲಕ ಪದಾರ್ಪಣೆ ಮಾಡಿದ ಪ್ರಣೀತಾ, ಈಗ ತೆಲುಗಿನ ಬಾವಾ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಬಾಯ್ಸ್, ಬೊಮ್ಮರಿಲು ಚಿತ್ರಗಳ ಖ್ಯಾತಿಯ ಸಿದ್ದಾರ್ಥ ಚಿತ್ರದ ನಾಯಕ. ಈಗಾಗಲೇ ಚಿತ್ರೀಕರಣ ಪ್ರಾರಂಭಗೊಂಡಿರುವ ಈ ಚಿತ್ರ ವರ್ಷದ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಂತೆ!

ಪೊರ್ಕಿ ಚಿತ್ರದಲ್ಲಿ ಈಕೆಯ ಹೆಸರು ಬರುತ್ತಿದ್ದಂತೆ, ಹಲವು ನಿರ್ಮಾಪಕರು ಈಕೆಯ ಕಾಲ್‌ಶೀಟ್‌ಗೆ ಮುಂದಾದರು. ಆದರೂ ಹಲವು ಅವಕಾಶಗಳಿಂದ ವಂಚಿತರಾಗಬೇಕಾಯಿತು. ಕಾರಣ. ಪೊರ್ಕಿ ಒಪ್ಪಂದ. ಚಿತ್ರ ಬಿಡುಗಡೆ ಬಳಿಕವೂ ಒಂದಷ್ಟು ಆಫರ್‌ಗಳನ್ನು ಕೈ ಬಿಟ್ಟರು. ನಾನು ಕೇವಲ ದೊಡ್ಡ ದೊಡ್ಡ ನಾಯಕರ ಜೊತೆ ಮಾತ್ರ ನಟಿಸೋದು ಅಂತ ಬಹಿರಂಗವಾಗಿಯೂ ಹೇಳಿಕೊಂಡಳು ಈ ಪ್ರಣೀತಾ. ಕೊನೆಗೂ ಈಗ ತೆಲುಗಿಗೆ ಹಾರಿದ್ದಾರೆ. ಅದಕ್ಕೆ ಕಾರಣ ಸಿದ್ಧಾರ್ಥ್ ನಾಯಕ ಎಂಬುದೂ ಇರಬಹುದು. ಮತ್ತೆ ಕನ್ನಡಕ್ಕೆ ಕಾಲಿಡುತ್ತಾರೋ ಗೊತ್ತಿಲ್ಲ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಪೊರ್ಕಿ, ಪ್ರಣೀತಾ, ಸಿದ್ಧಾರ್ಥ್, ದರ್ಶನ್