ಕೊನೆಗೆ ಹೋಳಿ ಚಿತ್ರಕ್ಕೆ ಮುಕ್ತಿ ದೊರೆತಿದೆ. ಚಿತ್ರ ಸೆಟ್ಟೇರಿ ಹಲವು ತಿಂಗಳು, ವರ್ಷವೇ ಕಳೆದು ಹೋಗಿದೆ. ಈಗ ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ಯು ಸರ್ಟಿಫಿಕೇಟ್ ದೊರೆತಿದೆ.
ಚಿತ್ರ ವೀಕ್ಷಿಸಿದ ಸೆನ್ಸಾರ್ ಮಂಡಳಿ ಐತಿಹಾಸಿಕ ಹಿನ್ನೆಲೆಯುಳ್ಳ ಸಾಮಾಜಿಕ ಚಿತ್ರ ಎಂದು ಪ್ರಶಂಸಿದೆಯಂತೆ. ಯಾವುದೇ ಕಟ್ ಹೇಳದೆ ಯು ಸರ್ಟಿಫಿಕೇಟ್ ನೀಡಿರುವುದು ಚಿತ್ರತಂಡಕ್ಕೆ ಖುಷಿ ನೀಡಿದೆ. ಚಿತ್ರವನ್ನು ಏಪ್ರಿಲ್ ಮೊದಲ ವಾರದಲ್ಲಿ ಬಿಡುಗಡೆ ಮಾಡಲು ಯೋಚನೆ ಹಾಕಿಕೊಂಡಿದ್ದಾರೆ ನಿರ್ದೇಶಕ ಶಂಕರಲಿಂಗ ಸುಗ್ನಳ್ಳಿ. ಇವರೇ ಚಿತ್ರಕ್ಕೆ ಕಥೆ ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ.
ಚಿತ್ರಕ್ಕೆ ದಯಾನಂದ ನೃತ್ಯ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ವೆಂಕಟೇಶ್ ಪ್ರಸಾದ್ ಮತ್ತು ರಾಗಿಣಿ ನಾಯಕ-ನಾಯಕಿಯರು. ಉಳಿದಂತೆ ಶೋಭರಾಜ್, ದೊಡ್ಡಣ್ಣ, ಕರಿಸುಬ್ಬಯ್ಯ, ಪವಿತ್ರಾ ಲೋಕೇಶ್ ಬ್ಯಾಂಕ್ ಜನಾರ್ದನ್ ಮುಂತಾದವರಿದ್ದಾರೆ.