ಕೋಮಲ್ ಚಿತ್ರದಲ್ಲಿದ್ದಾರೆ ಎಂದರೆ ಅಲ್ಲಿ ಹಾಸ್ಯ ಕಟ್ಟಿಟ್ಟ ಬುತ್ತಿ. ಈಗ ಯೋಗೀಶ್ ನಾಯಕನಾಗಿ ನಟಿಸುತ್ತಿರುವ ಯಕ್ಷ ಚಿತ್ರದಲ್ಲಿ ವಿಶೇಷ ಪಾತ್ರ ನಿರ್ವಹಣೆ ಮಾಡುತ್ತಿದ್ದಾರೆ. ಯೋಗೀಶ್ ಹಾಗೂ ಕೋಮಲ್ ಒಟ್ಟಾಗಿ ಅಭಿನಯಿಸುತ್ತಿರುವ ಚೊಚ್ಚಲ ಚಿತ್ರ ಇದಾಗಿದೆ.
ಈ ಚಿತ್ರದಲ್ಲಿ ಕೋಮಲ್ ಪೊಲೀಸ್ ಗುಪ್ತದಳದ ಅಧಿಕಾರಿಯ ಪಾತ್ರದ ಜೊತೆಗೆ ಎರಡು ಪಾತ್ರದಲ್ಲಿ ಮಿಂಚಲಿದ್ದಾರೆ. ಖ್ಯಾತ ನಟ ನಾನಾ ಪಾಟೇಕರ್ ಜೊತೆ ಕೋಮಲ್ ಹಾಸ್ಯದ ಸನ್ನಿವೇಶವನ್ನು ಇತ್ತೀಚೆಗೆ ಚಿತ್ರೀಕರಿಸಲಾಯಿತು. ಚಿತ್ರವನ್ನು ರಮೇಶ್ ಭಾಗವತ್ ನಿರ್ದೇಶಿಸುತ್ತಿದ್ದಾರೆ.
ಇದೊಂದು ಪರಿಶುದ್ಧ ಮನೋರಂಜನೆಯ ಚಿತ್ರ. ಹಾಗಾಗಿ ನೋಡುಗರಿಗೆ ಮನೋರಂಜನೆ ನೀಡಲಿದೆ ಎಂಬುದು ರಮೇಶ್ ಅಭಿಪ್ರಾಯ. ಚಿತ್ರಕ್ಕೆ ಯೋಗೀಶ್ ಜೊತೆ ರೂಬಿ, ಮಾಸ್ಟರ್ ಹಿರಣಯ್ಯ, ಮಹೇಶ್, ಗಿರೀಶ್ ಮಟ್ಟಣ್ಣನವರ್ ಇದ್ದಾರೆ.