ಉಪೇಂದ್ರ ನಿರ್ದೇಶನದ ಬಹುನಿರೀಕ್ಷಿತ ಚಿತ್ರ 'ಸೂಪರ್' ಇದೀಗ ಮೊದಲ ಹಂತದ ಚಿತ್ರೀಕರಣ ಮುಗಿಸಿ ಇದೇ ಏಪ್ರಿಲ್ ಹಾಗೂ ಮೇನಲ್ಲಿ ದುಬೈಗೆ ಪ್ರಯಾಣ ಬೆಳೆಸಲಿದೆ. ದುಬೈನಲ್ಲಿ ಎರಡು ಹಾಡುಗಳ ಚಿತ್ರೀಕರಣ ನಡೆಯಲಿದೆ.
ಈಗಾಗಲೇ ಉಪ್ಪಿ ದುಬೈನಲ್ಲಿ ಚಿತ್ರೀಕರಣಕ್ಕಾಗಿ ಕೆಲವು ಲೋಕೇಶನ್‌ಗಳನ್ನು ನೋಡಿಕೊಂಡು ಬೆಂಗಳೂರಿಗೆ ಮರಳಿದ್ದಾರೆ. ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಜೊತೆ ಉಪೇಂದ್ರ ದುಬೈನಲ್ಲಿ ಈಗಾಗಲೇ ಒಂದು ಸುತ್ತು ಹೊಡೆದು ಬಂದು ಕೆಲವೊಂದು ಉತ್ತಮ ಸ್ಥಳಗಳನ್ನು ಚಿತ್ರಕ್ಕಾಗಿ ಆಯ್ಕೆ ಮಾಡಿ ಬೆಂಗಳೂರಿಗೆ ಮರಳಿದ್ದಾರೆ. ಈ ಏಪ್ರಿಲ್‌ನಲ್ಲೇತಂಡ ದುಬೈಗೆ ಪ್ರಯಾಣ ಬೆಳಸಲಿದ್ದು, ದುಬೈನಲ್ಲಿ ಚಿತ್ರೀಕರಣ ಮುಗಿದ ತಕ್ಷಣ ಲಂಡನ್‌ಗೆ ಪ್ರಯಾಣ ಬೆಳೆಸಲಿದೆ.
ದುಬೈನಲ್ಲಿ ಹಾಡಿನ ಚಿತ್ರೀಕರಣವಾದರೆ, ಲಂಡನ್‌ನಲ್ಲಿ ಚಿತ್ರದ ಕೆಲ ದೃಶ್ಯಗಳ ಚಿತ್ರೀಕರಣ ನಡೆಯಲಿದೆ. ನಾಯಕಿ ನಯನತಾರಾ ಚೆನ್ನೈನಿಂದ ಚಿತ್ರತಂಡವನ್ನು ಸೇರಿಕೊಳ್ಳಲಿದ್ದಾರಂತೆ. ಖ್ಯಾತ ತೆಲುಗು ನಟರಾದ ಆಲಿ ಹಾಗ ಬ್ರಹ್ಮಾನಂದಂ ಕೂಡಾ ಚಿತ್ರತಂಡವನ್ನು ಸೇರಿಕೊಳ್ಳಲಿದ್ದಾರೆ.