ನಾಯಕಿಯ ಮನ ಒಲಿಸಲು ಬಂದ ಯುವ ನಾಯಕನಿಗೆ ಹಾಗೂ ಸಾಹಸ ತಂಡದ ಸದಸ್ಯರಿಗೂ ನಡೆಯುತ್ತಿದ್ದ ಮಾರಾಮಾರಿ ಅದು. ಅಷ್ಟರಲ್ಲಿ ಹೊಡೆದಾಟದ ನಂತರ ಎದುರಾಳಿಯ ಮೇಲೆ ನಾಯಕ ಕಲ್ಲು ಎತ್ತಿ ಹಾಕುವ ಸನ್ನಿವೇಶದ ಚಿತ್ರೀಕರಣ ನಡೆಯುತ್ತಿತ್ತು. ಆದರೆ ಆ ಕಲ್ಲು ಜಾರಿ ಚಿತ್ರದ ನಾಯಕನ ಕಾಲ ಮೇಲೆ ಬಿದ್ದು ಪೆಟ್ಟಾಗಿದೆ.
ಇದು ನಡೆದಿದ್ದು ನಾರದ ವಿಜಯ ಚಿತ್ರಕ್ಕಾಗಿ. ಚಿತ್ರದ ನಾಯಕನಾಗಿ ಅಭಿನಯಿಸುತ್ತಿರುವ ಸೂರ್ಯ ಅವರ ಕಾಲ ಮೇಲೆ ಕಲ್ಲು ಬಿದ್ದು ಕಾಲು ಪೆಟ್ಟು ಮಾಡಿಕೊಂಡಿದ್ದಾರೆ. ಸಧ್ಯಕ್ಕೆ ನಾರದ ವಿಜಯ ಚಿತ್ರದ ಚಿತ್ರೀಕರಣ ಸ್ಥಗಿತಗೊಂಡಿದೆ.
ಮಧ್ಯಮ ವರ್ಗದ ಜನರ ಜೀವನದಲ್ಲಿ ಜರಗುವ ಪ್ರಸಂಗಗಳನ್ನು ಆಧರಿಸಿರುವ ಈ ಚಿತ್ರದಲ್ಲಿ ಶಶಿಕುಮಾರ್ ಪ್ರಧಾನ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಸೂರ್ಯ ನಾಯಕನಾಗಿ ನಟಿಸುತ್ತಿದ್ದು, ಇವರಿಗೆ ಜೋಡಿಯಾಗಿ ಮೋಹಿನಿ ವಿಶ್ವಾಸ ಇದ್ದಾರೆ. ಮುಂದಿನ ಭಾಗದ ಚಿತ್ರೀಕರಣ ಯಾವಾಗ ಶುರುವಾಗುತ್ತೋ ಕಾದು ನೋಡಬೇಕು.