ತಾಜ್ ಮಹಲ್ ಚಿತ್ರದ ಖ್ಯಾತಿಯ ಚಂದ್ರು ನಿರ್ದೇಶನದ ಮೈಲಾರಿ ಚಿತ್ರಕ್ಕೆ ವಿಘ್ನ ಎದುರಾಗಿದೆ. ಮೈಲಾರಿ ಚಿತ್ರದ ಶೀರ್ಷಿಕೆ ವಿಷಯದಲ್ಲಿ ವಿವಾದವೆದ್ದಿದ್ದು, ಇದೀಗ ಅದು ಚಲನಚಿತ್ರ ವಾಣಿಜ್ಯ ಮಂಡಳಿಯ ಮೆಟ್ಟಿಲೇರಿದೆ.
ಕೆಲವೇ ದಿನಗಳ ಹಿಂದೆ ತಾಜ್‌ಮಹಲ್ ಖ್ಯಾತಿಯ ಆರ್.ಚಂದ್ರು ಶಿವರಾಜ್ ಕುಮಾರ್ ಹಾಗೂ ತಮಿಳಿನ ಬೆಡಗಿ ಸದಾ ತಾರಾಗಣದ ಮೈಲಾರಿ ಚಿತ್ರ ನಿರ್ಮಿಸುವುದಾಗಿ ಪ್ರಕಟಿಸಿ ಬಹಳ ದಿನಗಳೇನೂ ಆಗಿಲ್ಲ. ಈಗಾಗಲೇ ಚಿತ್ರೀಕರಣಕ್ಕೂ ತಯಾರಿ ನಡೆದಿದೆ. ಇದರ ಬೆನ್ನಲ್ಲೇ ನಿರ್ಮಾಪಕ ಅಶ್ವಿನಿ ರಾಮ್ ಪ್ರಸಾದ್, ತಾನು ಎರಡು ವರ್ಷದ ಹಿಂದೆಯೇ ಮೈಲಾರಿ ಎಂಬ ಹೆಸರನ್ನು ರಿಜಿಸ್ಟರ್ ಮಾಡಿಕೊಂಡಿದ್ದೇನೆ. ಹಾಗಾಗಿ ಈ ಹೆಸರಿನಲ್ಲಿ ಚಿತ್ರವನ್ನು ಬೇರಾರು ಮಾಡಬಾರದು ಎಂದು ವಾಣಿಜ್ಯ ವಂಡಳಿಗೆ ದೂರು ನೀಡಿದ್ದಾರೆ.
ಆದರೆ ಇತ್ತ ಕನಕಪುರ ಶ್ರೀನಿವಾಸ್ ನಿರ್ಮಾಣದ ಆಱ್. ಚಂದ್ರು ನಿರ್ದೇಶನ ಮೈಲಾರಿ ಚಿತ್ರ ಶೀಘ್ರವೇ ಸೆಟ್ಟೇರಲಿದೆ. ವಿಚಿತ್ರವೆಂದರೆ ಈ ಚಿತ್ರದ ನಾಯಕ ಶಿವಣ್ಣ. ಅಶ್ವಿನಿ ರಾಮ್ ಪ್ರಸಾದ್ ಕೂಡಾ 2 ವರ್ಷದ ಹಿಂದೆ ಮೈಲಾರಿ ಹೆಸರಿನ ಚಿತ್ರಕ್ಕೆ ಶಿವಣ್ಣ ಅವರಿಂದ ಕಾಲ್‌ಶೀಟ್ ಪಡೆದಿದ್ದರಂತೆ.
ಕನಕಪುರ ಶ್ರೀನಿವಾಸ್ ಅವರು ನನ್ನ ಬಳಿ ಮೈಲಾರಿ ಎಂಬ ಶೀರ್ಷಿಕೆಯನ್ನು ನನಡೆ ಕೊಡಿ ಎಂದು ನನ್ನ ಬಳಿ ಇತ್ತಚೆಗೆ ಕೇಳಿದ್ದರು. ಆದರೆ ಅದಕ್ಕೆ ನಾನು ತಯಾರಿರಲಿಲ್ಲ. ಶಿವಣ್ಣ ಅವರು ಕೂಡಾ ಸ್ವತಃ ಈ ಬಗ್ಗೆ ನನ್ನಲ್ಲಿ ಫೋನ್ ಮಾಡಿ ಹೇಳಿದರು. ಆದರೆ ನಾನು ಖಂಡಿತಾ ಮೈಲಾರಿ ಹೆಸರಿನಲ್ಲೇ ಚಿತ್ರ ಮಾಡುತ್ತೇನೆಂದೆ. ಈಗ ನಾನು ಹಾಗೆ ಹೇಳಿದ್ದರೂ ಕೇಳದೆ, 'ಮೈಲಾರಿ- ದಿ ಸ್ಯಾಂಡಲ್‌ವುಡ್ ಕಿಂಗ್' ಎಂಬ ಹೆಸರಿನಲ್ಲಿ ಚಿತ್ರ ಮಾಡುತ್ತಿದ್ದಾರೆ ಎಂದು ಅಲವತ್ತುಕೊಂಡರು.
ಒಟ್ಟಿನಲ್ಲಿ, ಇದೀಗ ಚಲನಚಿತ್ರ ವಾಣಿಜ್ಯ ಮಂಡಳಿ ಸಮಸ್ಯೆಯನ್ನು ಬಗೆಹರಿಸುವ ಜವಾಬ್ದಾರಿಯನ್ನು ಹೊತ್ತುಕೊಂಡಿದೆ. ಅದೇನಾಗುತ್ತದೋ ಕಾಯಬೇಕು,.