ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಸಿನಿಮಾಕ್ಕೆ ಅಗತ್ಯವಿದ್ದರೆ ಬಿಚ್ಚಲು ಸಿದ್ಧ: ಶೀನಾ ಶಹಬಾದಿ! (Sheena Shahabadi | Expose | Bollywood | Rajadhaani | Yesh)
ಸುದ್ದಿ/ಗಾಸಿಪ್
Bookmark and Share Feedback Print
 
Sheena Shahabadi
IFM
ಹಾಲಿವುಡ್ ಸಿನಿಮಾಗಳಲ್ಲಿ ಬಿಚ್ಚುವುದು, ಮುತ್ತಿಕ್ಕುವುದು ಎಲ್ಲಾ ಚಿತ್ರದ ಅವಿಭಾಜ್ಯ ಅಂಗ. ಆದರಿದು ಇತ್ತೀಚಿನ ಕೆಲವು ವರ್ಷಗಳಿಂದ ಬಾಲಿವುಡ್‌ನಲ್ಲೂ ಕಾಮನ್ ಎನ್ನಿಸುವಷ್ಟರ ಮಟ್ಟಿಗೆ ನಡೆಯುತ್ತಿದೆ. ಜೊತೆಗೆ ನಿಧಾನವಾಗಿ ದಕ್ಷಿಣ ಭಾರತೀಯ ಚಿತ್ರಗಳತ್ತಲೂ ಪ್ರಭಾವ ಬೀರುತ್ತಿದೆ. ಹೊಸದಾಗಿ ಪಾದಾರ್ಪಣೆ ಮಾಡುವ ಬೆಡಗಿಯರೂ ಕೂಡಾ ಇಂಥದ್ದಕ್ಕೆಲ್ಲ ರೆಡಿಯಾಗೇ ಬಂದಿರುತ್ತಾರೆ. ಈಗ ಇಂಥದ್ದಕ್ಕೆಲ್ಲ ತಯಾರಾಗಿರೋದು ಶೀನಾ ಶಹಬಾದಿ!

ಬಾಲಿವುಡ್‌ನಲ್ಲಿ ತೇರೇ ಸಂಗ್ ಎಂಬ ಚಿತ್ರದಲ್ಲಿ ನಟಿಸಿದ ಈಕೆ ಹಿರಿಯ ನಟಿ ಸಾಧನಾ ಸಿಂಗ್ ಅಂವರ ಮಗಳು. ತೆಲುಗಿನಲ್ಲೂ ಇತ್ತೀಚೆಗೆ ಬಿಂದಾಸ್ ಎಂಬ ಚಿತ್ರದಲ್ಲಿ ನಟಿಸಿ ಪಡ್ಡೆಗಳ ಹೃದಯ ಕೊಳ್ಳೆಹೊಡೆದಿದ್ದಳು. ಇದೀಗ ರಾಜಧಾನಿ ಎಂಬ ಕನ್ನಡ ಚಿತ್ರದಲ್ಲಿ ಯಶ್‌ಗೆ ಜೋಡಿಯಾಗಿ ನಟಿಸಲು ಬೆಂಗಳೂರಿಗೆ ಬಂದಿದ್ದಾಳೆ.

ಚಿತ್ರದ ಪಾತ್ರಕ್ಕೆ ಅಗತ್ಯವಿದ್ದರೆ ಖಂಡಿತಾ ನಾನು ಬಿಚ್ಚುವುದಕ್ಕೆ ಸಿದ್ಧ. ಬಿಚ್ಚಲು ನನಗೇನೂ ಮುಜುಗರವಿಲ್ಲ. ಆದರೆ ಅಗತ್ಯವಿದ್ದರೆ ಮಾತ್ರ ಬಿಚ್ಚುವ ನಿರ್ಧಾರ ಕೈಗೊಳ್ಳುತ್ತೇನೆ ಎನ್ನುತ್ತಾಳೆ ಶೀನಾ.

ನೋಡಲು ಇನ್ನೂ ಪುಟ್ಟ ಹುಡುಗಿಯಂತೆ ಕಾಣುವ ಶೀನಾಗೆ ಮದುವೆಯೂ ಆಗಿದೆ. ಆದರೆ ಅಷ್ಟೇ ಬೇಗ ವಿಚ್ಛೇದನವೂ ಆಗಿದೆ. ಅದಾದ ಮೇಲೆ ಚಿತ್ರದಲ್ಲಿ ನಟಿಸಲು ಚಿತ್ರರಂಗದ ಅಂಗಳಕ್ಕೆ ಇಳಿದಿದ್ದಾಳೆ. ಇತ್ತೀಚೆಗಷ್ಟೇ ಆಕೆಯ ಮಾಜಿ ಗಂಡ ಆಕೆಯ ಜೊತೆಗೆ ತಾನಿದ್ದಾಗ ತೆಗೆದಿದ್ದ ಕೆಲವು ಹಸಿಬಿಸಿ ಫೋಟೋಗಳನ್ನು ಇಂಟರ್‌ನೆಟ್‌ಗೆ ಹರಿಯಲು ಬಿಟ್ಟಿದ್ದ. ಇದು ಭಾರೀ ಸುದ್ದಿ ಮಾಡಿತ್ತು. ಇದಕ್ಕೆಲ್ಲ ಹೆದರದಿರುವ ಈ ಬೆಡಗಿ, ತಾನೀಗ ಚಿತ್ರರಂಗದಲ್ಲಿ ಮಿಂಚುತ್ತಿರುವು ನೋಡಿ ಆತನಿಗೆ ಹೊಟ್ಟೆಕಿಚ್ಚಾಗುತ್ತಿದೆ. ಅದಕ್ಕೇ ಆತ ಹೀಗೆಲ್ಲಾ ಮಾಡಿ ನನ್ನನ್ನು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾನೆ ಎಂದು ದೂರಿದ್ದಳು. ಸದ್ಯಕ್ಕೆ ಕನ್ನಡ ಚಿತ್ರದಲ್ಲಿ ಬ್ಯುಸಿಯಾಗಿರುವ ಶೀನಾ ಚಿತ್ರರಂಗದಲ್ಲಿ ಬೆಳೆಯಲು ಕನಸು ಕಾಣುತ್ತಿದ್ದಾಳೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಶೀನಾ ಶಹಬಾದಿ, ತೇರೇ ಸಂಗ್, ಬಿಂದಾಸ್, ರಾಜಧಾನಿ, ಯಶ್