ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಸಂಸಾರದಲ್ಲಿ ಸನಿದಪ: ಇದು 'ನಾವು ನಮ್ಮ ಹೆಂಡ್ತೀರು' (Navu namma hendtheeru | Harish Raj | K.V.Akshara)
ಸುದ್ದಿ/ಗಾಸಿಪ್
Bookmark and Share Feedback Print
 
ಗಂಡ ಹೆಂಡತಿಯರ ಜಗಳ ಉಂಡು ಮಲಗೋ ತನಕ ಎಂಬುದು ಗಾದೆ ಮಾತು. ಆದರೆ ಮಲಗಿ ಎದ್ದ ಮೇಲೂ ಜಗಳ ಮುಂದಯವರಿದರೆ? ಹಾಗೆ ಮುಂದುವರಿಸಬಾರದು ಎಂಬುದು ನಾವು ನಮ್ಮ ಹೆಂಡ್ತಿಯರು ಚಿತ್ರದ ಒನ್ಲೈನ್ ಸ್ಟೋರಿ.

ಒಬ್ಬ ಕಳ್ಳ ರಾತ್ರಿ ಹತ್ತು ಗಂಟೆಗೆ ಮನೆಗೆ ಕಳ್ಳತನಕ್ಕೆ ಬರುತ್ತಾನೆ. ಸಿಕ್ಕಿ ಬೀಳುವ ಅವಸರದಲ್ಲಿ ದೊಡ್ಡ ಗಡಿಯಾರದೊಳಗೆ ಸೇರಿಕೊಳ್ಳುತ್ತಾನೆ. ಕಳ್ಳನನ್ನು ಹುಡುಕಿಕೊಂಡು ಅವನ ಹೆಂಡತಿ ಅದೇ ಮನೆಗೆ ಬರುತ್ತಾಳೆ. ಕಳ್ಳರ ಬೆನ್ನೆತ್ತಿ ಪೊಲೀಸರು ಬರುತ್ತಾರೆ. ಹಾಗೇ ಒಬ್ಬೊರಾಗಿ ಮನೆ ಸೇರುವುದೇ ಚಿತ್ರದ ಕಥೆ ಎನ್ನುತ್ತಾರೆ ಇದನ್ನು ನಿರ್ದೇಶಿಸುತ್ತಿರುವವರು ಸೀತಾರಾಮ್ ಕಾರಂತ್.

ಗಂಡ ಹೆಂಡತಿ ನಡುವೆ ಜಗಳ ಸಾಮಾನ್ಯ. ಆದರೆ ಇದು ಪ್ರೀತಿಯ ಜಗಳವಾಗಬೇಕು. ಒಬ್ಬರಿಗೊಬ್ಬರು ಒಪ್ಪಿ ನಡೆದರೆ ಅದು ಜೀವನ ಎಂಬ ಸಂದೇಶವನ್ನು ಹಾಸ್ಯದ ಮೂಲಕ ಹೇಳಲಾಗಿದೆ ಎನ್ನುವುದು ಕಾರಂತ್ ಅಭಿಪ್ರಾಯ. ಇದು ಕೆ.ವಿ.ಅಕ್ಷರ ಅವರ ಸಂಸಾರದಲ್ಲಿ ಸನಿದಪ ನಾಟಕದ ಆಧಾರಿತ ಚಿತ್ರ. ಚಿತ್ರದಲ್ಲಿ ಹರೀಶ್ ರಾಜ್, ಅಕ್ಷತಾ ಶೆಟ್ಟಿ, ನೇತ್ರಾ ಶೆಟ್ಟಿ, ಅಶ್ವಿನಿ ಅಭಿನಯಿಸುತ್ತಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ನಾವು ನಮ್ಮ ಹೆಂಡ್ತೀರು, ಹರೀಶ್ ರಾಜ್, ಕೆವಿಅಕ್ಷರ, ಸಿತಾರಾಂ ಕಾರಂತ್