ವಿಷ್ಣು, ಪಾರ್ವತಮ್ಮ, ಪುನೀತ್‌ಗೆ ಪ್ರಶಸ್ತಿ, ಕೊನೆಗೂ ಪ್ರದಾನ!
ಶುಕ್ರವಾರ, 2 ಏಪ್ರಿಲ್ 2010( 13:34 IST )
MOKSHA
2007-08ನೇ ಸಾಲಿನ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಕೊನೆಗೂ ಕಾಲ ಕೂಡಿ ಬಂದಿದೆ. 2009ರ ಜನವರಿಯಲ್ಲೇ ಪ್ರಶಸ್ತಿ ಪಟ್ಟಿ ಬಿಡುಗಡೆ ಮಾಡಿದದ್ದರೂ, ಬರೋಬ್ಬರಿ ಒಂದು ವರ್ಷದ ನಂತರ ಇದೀಗ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಂಡಿದೆ. ಶಿವಮೊಗ್ಗದ ನೆಹರು ಕ್ರೀಡಾಂಗಣದಲ್ಲಿ ಇದೇ ಏ.4ರಂದು ನಡೆಯುವ ಸಮಾರಂಭದಲ್ಲಿ ಪಾರ್ವತಮ್ಮ ರಾಜ್ ಕುಮಾರ್, ಗಿರೀಶ್, ಕಾಸರವಳ್ಳಿ, ಉಮಾಶ್ರೀ, ಪುನೀತ್ ರಾಜ್ ಕುಮಾರ್ ಸೇರಿದಂತೆ ಚಿತ್ರರಂಗದ ಗಣ್ಯರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
ವಿಚಿತ್ರವೆಂದರೆ ಈ ಪ್ರಶಸ್ತಿ ಪಟ್ಟಿ ಪ್ರಕಟವಾದ ಸಂದರ್ಭ ಡಾ.ವಿಷ್ಣುವರ್ಧನ್ ನಮ್ಮೆಲ್ಲರ ಜೊತೆಗೇ ಇದ್ದರು. ಆ ಸಂದರ್ಭ ವಿಷ್ಣುವರ್ಧನ್ ಅವರಿಗೆ ಡಾ.ರಾಜ್ ಕುಮಾರ್ ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು. ಆದರೆ ಪ್ರಶಸ್ತಿ ಸ್ವೀಕರಿಸಲು ಮಾತ್ರ ಈಗ ಅವರಿಲ್ಲ.
MOKSHA
ಜೀವಮಾನ ಸಾಧನೆ ಪ್ರಶಸ್ತಿ- ಪಾರ್ವತಮ್ಮ ರಾಜ್ ಕುಮಾರ್. ಡಾ.ರಾಜ್ ಕುಮಾರ್ ಪ್ರಶಸ್ತಿ- ಡಾ.ವಿಷ್ಣುವರ್ಧನ್. ಪುಟ್ಟಣ್ಣ ಕಣಗಾಲ್ ಪ್ರಶಸ್ತಿ- ನಿರ್ದೇಶಕ ರೇಣುಕಾ ಶರ್ಮ. ಶ್ರೇಷ್ಠ ನಟ- ಪುನೀತ್ ರಾಜ್ ಕುಮಾರ್ (ಚಿತ್ರ- ಮಿಲನ) ಶ್ರೇಷ್ಠ ನಟಿ- ಉಮಾಶ್ರೀ (ಚಿತ್ರ- ಗುಲಾಬಿ ಟಾಕೀಸು) ಶ್ರೇಷ್ಠ ನಿರ್ದೇಶಕ- ಗಿರೀಶ್ ಕಾಸರವಳ್ಳಿ (ಚಿತ್ರ- ಗುಲಾಬಿ ಟಾಕೀಸು)
ಶ್ರೇಷ್ಠ ಚಿತ್ರ (ಮೊದಲ ಸ್ಥಾನ)- ಗುಲಾಬಿ ಟಾಕೀಸು (ನಿರ್ದೇಶಕ- ಗಿರೀಶ್ ಕಾಸರವಳ್ಳಿ, ನಿರ್ಮಾಪಕ- ಬಸಂತ್ ಕುಮಾರ್ ಪಾಟೀಲ್) ಶ್ರೇಷ್ಠ ಚಿತ್ರ (2ನೇ ಸ್ಥಾನ)- ಮೊಗ್ಗಿನ ಜಡೆ (ನಿರ್ದೇಶಕ- ಪಿ.ಆರ್.ರಾಮದಾಸ್ ನಾಯ್ಡು, ನಿರ್ಮಾಪಕ- ಪಿ.ಆರ್.ರಾಮದಾಸ ನಾಯ್ಡು ಹಾಗೂ ಬೀರಪ್ಪ) ಶ್ರೇಷ್ಠ ಚಿತ್ರ (3ನೇ ಸ್ಥಾನ)- ಮಾತಾಡ್ ಮಾತಾಡ್ ಮಲ್ಲಿಗೆ (ನಿರ್ದೇಶಕ- ನಾಗತಿಹಳ್ಳಿ ಚಂದ್ರಶೇಖರ್, ನಿರ್ಮಾಪಕ- ಕೆ.ಮಂಜು) ಸಾಮಾಜಿಕ ಕಳಕಳಿಯ ಚಿತ್ರ- ಬನದ ನೆರಳು (ನಿರ್ದೇಶಕ ಹಾಗೂ ನಿರ್ಮಾಪಕ- ಉಮಾಶಂಕರ ಸ್ವಾಮಿ) ಶ್ರೇಷ್ಠ ಮಕ್ಕಳ ಚಿತ್ರ- ಏಕಲವ್ಯ (ನಿರ್ದೇಶಕ- ಬರಗೂರು ರಾಮಚಂದ್ರಪ್ಪ, ನಿರ್ಮಾಣ ಅಭಿರುಚಿ ಚಿತ್ರ)
MOKSHA
ಶ್ರೇಷ್ಠ ಪ್ರಾದೇಶಿಕ ಚಿತ್ರ- ಬಿರ್ಸೆ (ತುಳು) ಶ್ರೇಷ್ಠ ಪೋಷಕ ನಟ- ರಾಜೇಶ್ (ಚಿತ್ರ- ಮೊಗ್ಗಿನ ಜಡೆ) ಶ್ರೇಷ್ಠ ಪೋಷಕ ನಟಿ- ಸ್ಮಿತಾ (ಚಿತ್ರ- ಅವ್ವ) ಶ್ರೇಷ್ಠ ಬಾಲನಟ: ಮಾ.ಲಿಖಿತ್ (ಚಿತ್ರ- ನಾನು ಗಾಂಧಿ) ಶ್ರೇಷ್ಠ ಬಾಲನಟಿ- ಬೇಬಿ ಪ್ರಕೃತಿ (ಚಿತ್ರ ಗುಬ್ಬಚ್ಚಿಗಳು)
ಶ್ರೇಷ್ಠ ಸಂಗೀತ ನಿರ್ದೇಶಕ- ಸಾಧು ಕೋಕಿಲ (ಚಿತ್ರ- ಇಂತಿ ನಿನ್ನ ಪ್ರೀತಿಯ) ಶ್ರೇಷ್ಠ ಹಿನ್ನೆಲೆ ಗಾಯಕ- ಎಸ್.ಪಿ.ಬಾಲಸುಬ್ರಹ್ಮಣ್ಯಂ (ಸವಿ ಸವಿ ನೆನಪು ಚಿತ್ರದ 'ನೆನಪು... ನೆನಪು..') ಶ್ರೇಷ್ಠ ಹಿನ್ನೆಲೆ ಗಾಯಕಿ- ವಾಣಿ (ಇಂತಿ ನಿನ್ನ ಪ್ರೀತಿಯ 'ಚಿತ್ರದ ಮುವನ ಕರೆದರೆ...') ಶ್ರೇಷ್ಠ ಗೀತ ರಚನೆಕಾರ- ಗೊಲ್ಲಹಳ್ಳಿ ಶಿವಪ್ರಸಾದ್ (ಮಾತಾಡ್ ಮಾತಾಡ್ ಮಲ್ಲಿಗೆ ಚಿತ್ರದ ಝಣ ಝಣ ಕಾಂಚಾಣ...) ಶ್ರೇಷ್ಠ ಕಥೆಗಾರ- ಪಿ.ಲಂಕೇಶ್ (ಚಿತ್ರ- ಅವ್ವ) ಶ್ರೇಷ್ಠ ಚಿತ್ರಕಥೆ- ಗಿರೀಶ್ ಕಾಸರವಳ್ಳಿ (ಚಿತ್ರ- ಗುಲಾಬಿ ಟಾಕೀಸು) ಶ್ರೇಷ್ಠ ಕಲಾ ನಿರ್ದೇಶಕ- ಜಿ.ಮೂರ್ತಿ (ಚಿತ್ರ- ಕರುನಾಡು)
MOKSHA
ಶ್ರೇಷ್ಠ ಛಾಯಾಗ್ರಹಣ- ಎಚ್.ಸಿ.ವೇಣು (ಚಿತ್ರ- ಆ ದಿನಗಳು) ಶ್ರೇಷ್ಠ ಸಂಕಲನಕಾರ- ಸುರೇಶ್ ಅರಸ್ (ಚಿತ್ರ- ಸವಿಸವಿ ನೆನಪು) ಶ್ರೇಷ್ಠ ಸಂಭಾಷಣಾಕಾರ- ಅಗ್ನಿ ಶ್ರೀಧರ್ (ಚಿತ್ರ- ಆ ದಿನಗಳು) ಶ್ರೇಷ್ಠ ಧ್ವನಿಗ್ರಹಣ- ಎನ್.ಕುಮಾರ್ (ಚಿತ್ರ- ಆಕ್ಸಿಡೆಂಟ್) ಶ್ರೇಷ್ಠ ಕಂಠದಾನ ಕಲಾವಿದ- ಸುದರ್ಶನ್ (ಚಿತ್ರ- ಆ ದಿನಗಳು) ಶ್ರೇಷ್ಠ ಕಂಠದಾನ ಕಲಾವಿದೆ- ಚಂಪಾ ಶೆಟ್ಟಿ (ಚಿತ್ರ- ಕರುನಾಡು) ಶ್ರೇಷ್ಠ ಕಲಾ ನಿರ್ದೇಶಕ- ಜಿ.ಮೂರ್ತಿ (ಚಿತ್ರ- ಕರುನಾಡು)