ಸ್ಯಾಂಡಲ್‌ವುಡ್‌ನಲ್ಲಿ ಗುರುವೊಬ್ಬನ ಆಗಮನವಾಗಿದೆ. ಆದರೆ, ಈ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೊಸದೊಂದು ಮೈಲುಗಲ್ಲು ಸೃಷ್ಟಿಯಾಗಲಿದೆ ಎಂದರೆ ಅದು ತಪ್ಪು.
ಇಲ್ಲಿ ಹೇಳುತ್ತಿರುವುದು 'ಸ್ಯಾಂಡಲ್‌ವುಡ್ ಗುರು' ಎಂಬ ವಿಚಿತ್ರ ನಾಮಧೇಯದ ಚಿತ್ರದ ಬಗ್ಗೆ. ನಿರ್ದೇಶಕ ಮಾನಸ್ ನಾಯಕನಾಗಿ ನಟಿಸುತ್ತಿರುವ ಚಿತ್ರವಿದು. ಪ್ರತಿಯೊಬ್ಬರಿಗೂ ಒಂದಲ್ಲ ಒಂದು ರೀತಿಯಲ್ಲಿ ಗುರು ಅಂತ ಇದ್ದೇ ಇರುತ್ತಾರೆ. ಅದೇ ಸ್ಯಾಂಡಲ್‌ವುಡ್ ಗುರು ಎನ್ನುತ್ತಾರೆ ಮಾನಸ್.
ಅದೇನೇ ಇರಲಿ. ಇದು ಸಂಪೂರ್ಣ ಹೊಸಬರ ಚಿತ್ರ. ಜಾಹೀರಾತು, ಫ್ಯಾಷನ್ ಶೋ, ಡಾಕ್ಯುಮೆಂಟರಿ ಮತ್ತಿತರ ವಿಭಾಗಗಳಲ್ಲಿ ಅನುಭವ ಹೊಂದಿರುವ ಮಾನಸ್ ಇಲ್ಲಿ ನಿರ್ದೇಶಕ ಕಮ್ ಹೀರೋ. ಕಥೆ, ಚಿತ್ರಕಥೆ ಜವಾಬ್ದಾರಿ ಕೂಡ ಅವರದ್ದೇ. ಇವರು ಹಿರಿಯ ಛಾಯಾಗ್ರಾಹಕ ಎಂ.ಆರ್.ಕೆ. ಮೂರ್ತಿ ಅವರ ಮೊಮ್ಮಗ.
ಇಲ್ಲಿ ಪ್ರೀತಿಗಿಂತ ಹೆಚ್ಚು ಏನಿದು? ಎಂಬುದು ಕಥೆಯ ಸಾರಾಂಶ. ಇಲ್ಲಿ ನಾಯಕಿ ಸಂಗೀತಾ ಶೆಟ್ಟಿ ಎಂಬಾಕೆ ಸ್ಯಾಂಡಲ್‌ವುಡ್ಡಿಗೆ ಕಾಲಿಡುತ್ತಿದ್ದಾರೆ. ಅಂತೂ ಈಗಾಗಲೇ ಸದ್ದಿಲ್ಲದೆ ಚಿತ್ರೀಕರಣ ಮುಗಿಸಿ, ಡಬ್ಬಿಂಗ್ ಹಾಗೂ ರೀರೆಕಾಡಿಂಗ್ ಕಾರ್ಯದಲ್ಲಿ ಮಗ್ನವಾಗಿದೆ ಚಿತ್ರತಂಡ!