ಕನ್ನಡ ಚಿತ್ರರಂಗದಲ್ಲಿ ದಿನಕ್ಕೊಬ್ಬರು ಹೊಸ ನಟ ನಟಿಯರು ಬರುತ್ತಿದ್ದಾರೆ. ಬಂದವರೆಲ್ಲಾ ಅಷ್ಟೇ ಬೇಗ ವಾಪಾಸ್ ತೆರೆ ಮರೆಗೆ ಸರಿಯುತ್ತಾರೆ. ಆದರೆ ಹಾಗೇ ಬಂದ ಅಕ್ಷತಾ ಶೆಟ್ಟಿ ಎಂಬಾಕೆಗೆ ಮಾತ್ರ ಇದೀಗ ಹೊಸ ಹೊಸ ಅವಕಾಶಗಳು ತೆರೆದುಕೊಳ್ಳುತ್ತಿವೆ.
ತಮ್ಮ ಮೊದಲ ಚಿತ್ರ ಬಿಡುಗಡೆಯಾಗುವ ಮುನ್ನವೇ ಮತ್ತೆರಡು ಚಿತ್ರಕ್ಕೆ ಆವರು ಆಯ್ಕೆಯಾಗಿದ್ದಾರೆ. ಅಭಿರಾಮ್ ಚಿತ್ರದ ಮೂಲಕ ಗಾಂಧಿನಗರಕ್ಕೆ ಕಾಲಿಟ್ಟ ಅಕ್ಷತಾಗೆ ಈಗ ಹೊಸ ಹೊಸ ಅವಕಾಶಗಳು ಸಿಗುತ್ತಿವೆ. ಇತ್ತೀಚೆಗೆ ಆರಂಭವಾಗಿರುವ ಸ್ಯಾಂಡಲ್‌ವುಡ್ ಗುರು ಮತ್ತು ನಾವು ನಮ್ಮ ಹೆಂಡ್ತಿಯರು ಚಿತ್ರಕ್ಕೆ ಅಕ್ಷತಾ ಶೆಟ್ಟಿ ಆಯ್ಕೆಯಾಗಿದ್ದಾರೆ.
ದ್ವಿತೀಯ ಪಿಯುಸಿ ಕಲಿಯುತ್ತಿರುವ ಅಕ್ಷತಾ ಮೂಲತಃ ಮಂಗಳೂರಿನವರು. ಪ್ರಸ್ತುತ ಬೆಂಗಳೂರಿನಲ್ಲಿ ವಾಸ. ಈಕೆಗೆ ಹುಬ್ಬಳ್ಳಿ ಹುಡುಗಿ ಎಂಬ ಹೆಸರೂ ಇದೆ. ಕಾರಣ. ಈಕೆ ಹುಬ್ಬಳ್ಳಿಯಲ್ಲಿ ಕೆಲ ದಿನ ವಾಸವಾಗಿದ್ದರಂತೆ. ಅಂದ ಹಾಗೆ, ಈಕೆಯ ತಾಯಿ ಫ್ಯಾಷನ್ ಡಿಸೈನರ್. ಇದು ಕೂಡ ನಟಿಯಾಗಲು ಸ್ಪೂರ್ತಿ ಎನ್ನುತ್ತಾರೆ ಅಕ್ಷತಾ.
ಇದೀಗ ನಾಯಕಿಯಾಗಿರುವ ಮೂರು ಚಿತ್ರಗಳ ಮೇಲೆ ಭಾರಿ ನಿರೀಕ್ಷೆ ಅವರಿಗಿದೆ. ಚಿತ್ರ ಬಿಡುಗಡೆಯ ಬಳಿಕ ಇನ್ನಷ್ಟು ಅವಕಾಶಗಳ ನಿರೀಕ್ಷೆಯಲ್ಲಿದ್ದಾರೆ ಅಕ್ಷತಾ ಶೆಟ್ಟಿ.