ಸಂಗೀತ ಕಲಿಯುತ್ತಿರುವ ಹುಡುಗನಿಗೆ ಅಚಾನಕ್ ಆಗಿ ಸಿಗುವ ಹುಡುಗಿಯ ಮೇಲೆ ಪ್ರೇಮಾಂಕುರವಾಗುತ್ತದೆ. ಆಮೇಲೆ ನೋವು, ಮಧ್ಯದಲ್ಲಿ ಹೊಡೆದಾಟ- ಬಡಿದಾಟ. ಇದು ಚಿರು ಚಿತ್ರದ ಒನ್ಲೈನ್ ಸ್ಟೋರಿ.
ಈ ಚಿತ್ರವನ್ನು ಈ ಬಾರಿ ಮಹೇಶ್ ಬಾಬು ಅವರೇ ಮಾಡುತ್ತಿದ್ದಾರೆ. ಇದಕ್ಕೆ ಜನಾರ್ದನ ಮಹರ್ಷಿ ಕಥೆ ಬರೆದಿಲ್ಲ ಎಂದು ಮಹೇಶ್ ಬಾಬು ಮೊದಲೇ ಹೇಳಿಕೊಂಡಿದ್ದಾರೆ. ಹೀಗೆ ಅವರು ಹೇಳಲು ಕಾರಣವೂ ಇದೆ. ಈ ಮೊದಲು ಆಕಾಶ್ ಚಿತ್ರದಿಂದ ಅಭಯ್ ಚಿತ್ರದವರೆಗೆ ಮಹೇಶ್ ಬಾಬು ಅವರ ಎಲ್ಲಾ ಚಿತ್ರಗಳಿಗೆ ಕಥೆ ಒದಗಿಸಿದ್ದು ಜನಾರ್ದನ ಮಹರ್ಷಿ. ಆದರೆ ಇದರಲ್ಲಿ ಗೆದ್ದಿದ್ದು ಕೇವಲ ಎರಡು. ಸೋತಿದ್ದು ನಾಲ್ಕು. ಅಲ್ಲದೆ, ಪರಭಾಷೆಯ ನಾಲ್ಕಾರು ಚಿತ್ರಗಳ ಕಥೆ ಕದ್ದು ಕನ್ನಡದಲ್ಲಿ ಹೇಳುತ್ತಾರೆ ಎಂಬ ಆರೋಪ ಬೇರೆ ಎದುರಿಸುತ್ತಿದ್ದಾರೆ. ಅದಕ್ಕಾಗಿ ಈ ಬಾರಿ ತಮ್ಮ ಹೊಸ ಚಿತ್ರ ಚಿರು ಕಥೆ ಅವರದ್ದಲ್ಲ ಎಂದು ಸ್ಪಷ್ಟನೆ ನೀಡಿದ್ದು.
ಅದೆಲ್ಲಾ ಹಾಗಿರಲಿ. ನಾನಿಲ್ಲಿ ಲವರ್ ಬಾಯ್. ತುಂಬಾ ಲವಲವಿಕೆ ಇರೋ ಹುಡುಗ, ಅಭಿಮಾನಿಗಳಿಗೆ ಮತ್ತು ಫ್ಯಾಮಿಲಿ ವರ್ಗಕ್ಕೂ ಇಷ್ಟವಾಗುವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ ಎನ್ನುತ್ತಿದ್ದಾರೆ ಚಿರಂಜೀವಿ ಸರ್ಜಾ. ನಾಯಕಿಯಾಗಿ ಕೃತಿ ಕರಬಂಧ ನಟಿಸುತ್ತಿದ್ದಾರೆ. ಇದು ಅವರಿಗೆ ಎರಡನೇ ಚಿತ್ರ. ಮೊದಲನೆಯದ್ದು ತೆಲುಗಿನ ಬೋನಿ. ಇವರೊಂದಿಗೆ ಹಾಸ್ಯ ನಟರಾದ ರಂಗಾಯಣ ರಘು, ಬುಲೆಟ್ ಪ್ರಕಾಶ್ ಮತ್ತು ಉಮೇಶ್ ಇದ್ದಾರೆ.