ವಾಯುಪುತ್ರನ ಗೆಟಪ್‌ನಲ್ಲಿ ಕನ್ನಡ ಚಿತ್ರರಂಗಕ್ಕೆ ಪರಿಚಯವಾದ ಚಿರಂಜೀವಿ ಸರ್ಜಾ, ಈಗ ಎರಡು ದೊಡ್ಡ ಬಜೆಟ್ ಚಿತ್ರಗಳಲ್ಲಿ ಬ್ಯುಸಿಯಾಗಿದ್ದರೂ, ಇದೀಗ ಮತ್ತೊಂದು ಚಿತ್ರಕ್ಕೆ ನಾಯಕನಾಗಿ ಆಯ್ಕೆಯಾಗಿದ್ದಾರೆ.
ಕೆ. ಮಾದೇಶ ನಿರ್ದೇಶನದ ದಂಡಂ ದಶಗುಣಂ ಚಿತ್ರಕ್ಕೆ ಚಿರಂಜೀವಿ ಸರ್ಜಾ ನಾಯಕ. ಮೊದಲ ಚಿತ್ರ ವಾಯುಪುತ್ರದಲ್ಲಿ ನಿರೀಕ್ಷಿಸಿದಷ್ಟು ಗೆಲುವು ಸಿಗದೇ ಹೋದರೂ ರಾಮುರ ಗರಡಿಯಲ್ಲಿ ಸರ್ಜಾ ಗಂಡೆದೆಯಾದರು. ಈ ಚಿತ್ರ ಮುಗಿಯುವ ಮುನ್ನವೇ ಚಿರುಗೆ ನಾಯಕ.
ಇಂತಿಪ್ಪಾ ಚಿರಿಂಜೀವಿ ಸರ್ಜಾ ಈಗ ದಂಡಂ ದಶಗುಣಂ ಎನ್ನುತ್ತಿದ್ದಾರೆ. ಕಳೆದ ವರ್ಷ ಯಶಸ್ವಿ ಚಿತ್ರ ಎನಿಸಿಕೊಂಡ ರಾಮು ಚಿತ್ರದ ಬಳಿಕ ನಿರ್ದೇಶಕ ಕೈಗೆತ್ತಿಕೊಂಡಿರುವ ಚಿತ್ರ ಇದಾಗಿದೆ. ಇದಕ್ಕೆ ಎ. ಗಣೇಶ್ ನಿರ್ಮಾಪಕರು. ಇದು ಅವರ ಎಂಟನೇ ನಿರ್ಮಾಣ. ಬರುವ ಮೇ ಕೊನೆ ವಾರದಲ್ಲಿ ಅಥವಾ ಜೂನ್ ಮೊದಲಲ್ಲಿ ಈ ಚಿತ್ರ ಸೆಟ್ಟೇರಲಿದೆ. ಚಿತ್ರದಲ್ಲಿ ಇಬ್ಬರು ನಾಯಕರಿದ್ದು, ಮತ್ತೊಬ್ಬ ನಾಯಕ ಮತ್ತು ನಾಯಕಿಯ ಹುಡುಕಾಟ ನಡೆಯುತ್ತಿದೆ.