ಮಿ.ಗರಗಸ ಚಿತ್ರದ ಅಭೂತಪೂರ್ವ ಯಶಸ್ಸಿನ ಬಳಿಕ ಕೋಮಲ್ ಚಮ್ಕಾಯ್ಸಿ ಚಿಂದಿ ಉಡಾಯ್ಸಿಯಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದರು. ಆ ಚಿತ್ರದ ಕೋಮಲ್ ಅಭಿನಯ ಎಲ್ಲರಿಗೂ ಪ್ರಿಯವಾಯಿತು.
ಇದೀಗ ಮತ್ತೊಂದು ಚಿತ್ರಕ್ಕೆ ನಾಯಕನಾಗಿ ಬಣ್ಣ ಹಚ್ಚುತ್ತಿದ್ದಾರೆ ಕೋಮಲ್. ನಂದೀಶ್ ಎಂಬ ಹೊಸ ಚಿತ್ರ. ಪ್ರಭಾಕರ್ ಎಂಬವರು ಚಿತ್ರದ ನಿರ್ದೇಶಕರು. ಇವರು ಆಪ್ತರಕ್ಷಕ ಚಿತ್ರದ ನಿರ್ದೇಶಕ ಪಿ. ವಾಸು ಅವರ ಬಳಿ ಸಹಾಯಕರಾಗಿ ಅನುಭವವಿದೆ.
ಕೋಮಲ್ ಇದ್ದಾರೆ ಅಂದರೆ ಅಲ್ಲಿ ಹಾಸ್ಯ ಇದ್ದೇ ಇರುತ್ತದೆ. ಅದರಂತೆ ನಂದೀಶ ಕೂಡ ಹಾಸ್ಯ ಪ್ರಧಾನ ಚಿತ್ರ ಎಂಬುದರಲ್ಲಿ ಎರಡು ಮಾತಿಲ್ಲ. ಅಂದಹಾಗೆ, ಈ ಚಿತ್ರವನ್ನು ಕೋಮಲ್ ಸೌಂದರ್ಯ ಲಹರಿ ಕಂಬೈನ್ಸ್ ಎಂಬ ಬ್ಯಾನರ್‌ನಡಿಯಲ್ಲಿ ನಿರ್ಮಿಸುತ್ತಿದ್ದಾರೆ. ನಾಯಕಿಯ ಆಯ್ಕೆ ಇನ್ನು ನಡೆಯಬೇಕಿದೆ. ಈ ಬಾರಿಗೆ ರಂಗಭೂಮಿ ಕಲಾವಿದರಿಗೆ ಹಾಗೂ ಉತ್ತಮ ಪ್ರತಿಭೆ ಹೊಂದಿರುವ ಒಂದಷ್ಟು ಹೊಸ ಮುಖಗಳಿಗೆ ಅವಕಾಶ ನೀಡಲು ಯೋಜಿಸಿದ್ದಾರೆ ನಿರ್ದೇಶಕ ಪ್ರಭಾಕರ್.