ಮಧ್ಯಮ ವರ್ಗದ ಜನರ ನಿತ್ಯ ಜೀವನದ ಪ್ರಸಂಗಗಳನ್ನು ಆಧರಿಸಿ ನಿರ್ಮಾಣವಾಗುತ್ತಿರುವ ನಾರದ ವಿಜಯ ಚಿತ್ರೀಕರಣ ಮತ್ತೆ ಸ್ಥಗಿತಗೊಂಡಿದೆ.
ಅದಕ್ಕೆ ಕಾರಣ. ಚಿತ್ರದ ನಾಯಕ ಸೂರ್ಯ ಮತ್ತೆ ಪೆಟ್ಟು ಮಾಡಿಕೊಂಡಿದ್ದಾರೆ. ಚಿತ್ರವನ್ನು ಮಂಜು ದೈವಜ್ಞ ನಿರ್ದೇಶಿಸುತ್ತಿದ್ದಾರೆ. ಈ ಹಿಂದೆ ನಟ ಅನಂತ್‌ನಾಗ್ ದ್ವಿಪಾತ್ರದಲ್ಲಿ ಅಭಿನಯಿಸಿ ಪ್ರೇಕ್ಷಕರ ಮನಸೂರೆಗೊಂಡಿದ್ದ ಈ ಚಿತ್ರದ ಹೆಸರನ್ನು ಬಳಸಿಕೊಂಡು ನಿರ್ಮಾಣವಾಗುತ್ತಿರುವ ಚಿತ್ರ ಇದಾಗಿದೆ.
ಚಿತ್ರದಲ್ಲಿ ಶಶಿಕುಮಾರ್ ವಿಶೇಷ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ನಾಯಕಿಯಾಗಿ ಮೋಹಿನಿ ವಿಶ್ವಾಸ್ ನಟಿಸುತ್ತಿದ್ದಾರೆ. ಚಿತ್ರಕ್ಕೆ ನಿರ್ದೇಶಕರಾದ ಮಂಜು ಅವರೆ ಕತೆ, ಚಿತ್ರಕತೆ ಬರೆದಿದ್ದಾರೆ.