ಬೆಂಗಳೂರು ಮಹಾನಗರದ ಪಾಲಿಕೆ ಚುನಾವಣೆಗೆ ಇಂದು ಫಲಿತಾಂಶ ಬಂದಿದೆ. ಆದರೆ ಮೈಸೂರಿನಲ್ಲಿ ಸದ್ದಿಲ್ಲದೆ ಚುನಾವಣೆ ನಡೆದು ಅದರಲ್ಲಿ ಸ್ಪರ್ಧಿಸಿದ್ದ ಮಹಿಳಾ ಅಭ್ಯರ್ಥಿ ಭಾರಿ ಅಂತರದಿಂದ ಜಯ ಗಳಿಸಿದ್ದಾರೆ.
ಇದು ನಡೆದಿದ್ದು ಹುಲಿ ಚಿತ್ರಕ್ಕಾಗಿ. ಓಂಪ್ರಕಾಶ್ ರಾವ್ ನಿರ್ದೇಶಿಸುತ್ತಿರುವ ಈ ಚಿತ್ರದ ಚಿತ್ರೀಕರಣವನ್ನು ಮೈಸೂರಿನ ಟೌನ್‌ಹಾಲ್‌ನಲ್ಲಿ ಚಿತ್ರೀಕರಿಸಿಕೊಳ್ಳಲಾಯಿತು. ಈ ಸನ್ನಿವೇಶದಲ್ಲಿ ಖ್ಯಾತ ಉದ್ಯಮಿ ಶೋಭರಾಜ್ ಅವರ ಸಹೋದರನಾಗಿ ಪ್ರೇಂ ಮತ್ತು ಮಹಿಳಾ ಅಭ್ಯರ್ಥಿಯಾಗಿ ಮಾಳವಿಕಾ ಅಭಿನಯಿಸಿದ್ದರು.
ಚಿತ್ರದಲ್ಲಿ ಕಿಶೋರ್ ಮತ್ತು ಜೆನ್ನಿಫರ್ ಕೊತ್ವಾಲ್ ನಾಯಕ ನಾಯಕಿಯರು. ಉಳಿದಂತೆ ಅವಿನಾಶ್, ಮಾಳವಿಕಾ, ಆದಿಲೋಕೇಶ್, ಚಿತ್ರಾ ಶೆಣೈ ಸೇರಿದಂತೆ ಹಲವರು ಚಿತ್ರದಲ್ಲಿದ್ದಾರೆ.