3 ಈಡಿಯೆಟ್ಸ್ ಚಿತ್ರ ಯಾವ ಪರಿ ಯಶಸ್ಸು ಗಳಿಸಿದೆಯೋ ಗೊತ್ತಿಲ್ಲ. ಆದರೆ ಇದೀಗ ಕನ್ನಡಕ್ಕೆ ಈಡಿಯೇಟ್ಸ್ ಬರುತ್ತಿದ್ದಾರೆ. ಆದರೆ ಇದು ಹಿಂದಿಯ ರೀಮೇಕ್ ಅಲ್ಲ. ಇಲ್ಲಿ 3 ರ ಬದಲು 5 ಜನರಿದ್ದಾರೆ. ಅದಕ್ಕಾಗಿ ಇದು 5 ಈಡಿಯೇಟ್ಸ್.
ಹೌದು, ಕನ್ನಡದಲ್ಲಿ 5 ಈಡಿಯೇಟ್ಸ್ ಚಿತ್ರ ಶೀಘ್ರದಲ್ಲಿ ಸೆಟ್ಟೇರಲಿದೆ. ಇದನ್ನು ಮಾಡುತ್ತಿರುವವರು ಬೇರಾರೂ ಅಲ್ಲ. ಇತ್ತೀಚೆಗಷ್ಟೇ ಗ್ರಹಸ್ಥಾಶ್ರಮ ಪ್ರವೇಶಿಸಿದ ಮಾಸ್ಟರ್ ಅಲ್ಲ, ಮಿಸ್ಟರ್ ಆನಂದ್. ಈಗಾಗಲೇ ಎಸ್ಸೆಸ್ಸೆಲ್ಸಿ ನನ್ಮಕ್ಕಳು ಧಾರಾವಾಹಿ ನಿರ್ದೇಶಿಸಿ ಸೈ ಎನಿಸಿಕೊಂಡಿರುವ ಆನಂದ್ ಮೊದಲ ಬಾರಿಗೆ ಚಿತ್ರವೊಂದನ್ನು ನಿರ್ದೇಶಿಸುತ್ತಿದ್ದಾರೆ.
ಅಂದಹಾಗೆ ಇದೊಂದು ಪಕ್ಕಾ ಕಾಮಿಡಿ ಚಿತ್ರ. ಸಿನಿಮಾ ನೋಡಲು ಬರುವ ಪ್ರೇಕ್ಷಕರಿಗೆ ಎಲ್ಲೂ ಬೋರಾಗದಂತೆ ಚಿತ್ರ ಮಾಡಲಾಗುತ್ತಿದೆ ಎನ್ನುತ್ತಾರೆ ಆನಂದ್. ಇನ್ನೊಂದು ವಿಷಯ, ನವೀನ್ ಕೃಷ್ಣ, ಆನಂದ್, ವಾಸು, ಪೆಟ್ರೊಲ್ ಪ್ರಸನ್ನಾ, ಹರ್ಷಿಕಾ ಪೂಣಚ್ಚ ಚಿತ್ರದ ಈಡಿಯೇಟ್ಸ್‌ಗಳು. ಅಂದ ಹಾಗೆ ಚಿತ್ರ ಇಂದು ಸೆಟ್ಟೇರಲಿದೆ.