ಪ್ರಸ್ತುತ ಕನ್ನಡ ಚಿತ್ರರಂಗದಲ್ಲಿ ಸಿನಿಮಾಗಳು ನೂರು ದಿನ ಓಡಲು ಪರದಾಡುವ ಇಂತಹ ಸಂದರ್ಭದಲ್ಲಿ ಧಾರಾವಾಹಿ ಒಂದು 1000 ಮೆಟ್ಟಿಲುಗಳನ್ನು ದಾಟಿದೆ.
ಇದು ಪುಣ್ಯಕೋಟಿಯ ಕತೆ. ಈ ಸಂಭ್ರಮದಲ್ಲಿ ಧಾರಾವಾಹಿ ತಂಡ ಸಾವಿರದ ಸಂಭ್ರಮ ಎಂಬ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಮಾಸ್ಟರ್ ಹಿರಣಯ್ಯ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿರುವ ಈ ಧಾರಾವಾಹಿಗೆ ಎ.ಜಿ. ಶೇಷಾದ್ರಿ ನಿರ್ದೇಶಕರು.
ಈ ಧಾರಾವಾಹಿಯ ಯಶಸ್ಸಿನ ಸಂಭ್ರಮದಲ್ಲಿ ನಿರ್ಮಾಪಕ ಸೂರ್ಯ, ಕಲಾವಿದರಾದ ಜಯಶ್ರೀ, ಸಂಧ್ಯಾ ವೆಂಕಟೇಶ್, ವರ್ಷಿಣಿ ಕುಸುಮ, ಮಾಲತಿ ಸರದೇಶಪಾಂಡೆ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. ಅಂದ ಹಾಗೆ ಧಾರಾವಾಹಿಯ ಸಾವಿರದ ಸಂಭ್ರಮದಲ್ಲಿ ತಂಡದ ಪರವಾಗಿ ಕ್ಯಾನ್ಸರ್‌ನಿಂದ ಬಳಲುತ್ತಿರುವ ಹೆಣ್ಣುಮಗಳೊಬ್ಬಳಿಗೆ 15 ಸಾವಿರ ರೂ. ಧನ ಸಹಾಯ ಮಾಡಿದರು ನಿರ್ಮಾಪಕ ಸೂರ್ಯ.