ತಮ್ಮ ಸಹಜ ಅಭಿನಯದ ಮೂಲಕ ಕನ್ನಡ ಚಿತ್ರರಂಗದಲ್ಲಿ ಗಟ್ಟಿ ನೆಲೆ ಕಂಡುಕೊಂಡ ನಟ ರಮೇಶ್ ಅರವಿಂದ್. ಈಗ ಮತ್ತೊಂದು ಹೊಸ ಚಿತ್ರ ಒಪ್ಪಿಕೊಂಡಿದ್ದಾರೆ.
ಚಿತ್ರಕ್ಕಿನ್ನು ಹೆಸರಿಟ್ಟಿಲ್ಲ. ಹಾಗೆಯೇ ನಿರ್ದೇಶಕರು ಯಾರೆಂಬುದು ಇನ್ನು ನಿಕ್ಕಿಯಾಗಿಲ್ಲ. ಅಂತಿಮವಾಗಿ ರಮೇಶ್ ಅವರೇ ನಿರ್ದೇಶಕರಾದರೂ ಆಶ್ಚರ್ಯವಿಲ್ಲ. ಚಿತ್ರಕ್ಕೆ ಗಂಡ ಹೆಂಡತಿಯ ಸಂಜನಾ ನಾಯಕಿ. ಇನ್ನುಳಿದ ಕಲಾವಿದರು ಮತ್ತು ತಂತ್ರಜ್ಞರ ಆಯ್ಕೆ ಇನ್ನು ಆಗಬೇಕಿದೆ. ಹಾಗಾದರೆ ಚಿತ್ರ ಮಾಡಲು ಮುಂದೆ ಬಂದವರಾದರೂ ಯಾರು? ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.
ರಮೇಶ್ ಅವರ ಸರಳತೆಯನ್ನು ಮೆಚ್ಚಿ, ಮತ್ತೊಂದು ಚಿತ್ರ ಮಾಡಲು ಮುಂದೆ ಬಂದವರು ನಿರ್ಮಾಪಕ ಡಾ. ಸಿ.ಜೆ. ರಾವ್. ಇದೊಂದು ಪಕ್ಕಾ ಕೌಟುಂಬಿಕ ಚಿತ್ರವಾಗಿರುತ್ತದೆ ಎಂದಷ್ಟೇ ಹೇಳಿ ಮಾತು ಮುಗಿಸಿದ್ದಾರೆ ರಮೇಶ್. ಅಂದಹಾಗೆ ರಮೇಶ್ ಅಭಿನಯದ ಕೃಷ್ಣ ನೀ ಲೇಟಾಗ್ ಬಾರೋ ಚಿತ್ರ ಇದೇ ಶುಕ್ರವಾರ ಬಿಡುಗಡೆ ಕಾಣುತ್ತಿದೆ. ಇವರ ಪ್ರೀತಿಯಿಂದ ರಮೇಶ್ ಚಿತ್ರ ಚಿತ್ರೀಕರಣ ನಡೆಯುತ್ತಿದೆ. ಅಂತೂ ರಮೇಶ್ ಹೊಸ ಯುಗ ಮತ್ತೆ ಪ್ರಾರಂಭಗೊಂಡಿದೆ.