ಕುರುಬನ ರಾಣಿ ಮದುವೆ ಆಗ್ತಾರಂತೆ ಅನ್ನೋ ಸುದ್ದಿ, ಬಾಲಿವುಡ್ಡು, ಸ್ಯಾಂಡಲ್‌ವುಡ್ಡು, ಕಾಲಿವುಡ್ಡು ಸೇರಿದಂತೆ ಎಲ್ಲಾ ಕಡೆ ಶ್ಯಾನೆ ಸುದ್ದಿ ಆಗ್ತಾ ಇದೆಯಂತೆ. ಒಂದು ಕಾಲದಲ್ಲಿ ಪಡ್ಡೆ ಹೈಕಳ ನಿದ್ದೆ ಕೆಡಿಸಿದ್ದ ಈಯಮ್ಮ ಈಗ ಕೊಂಚ ತಮ್ಮ ಜನಪ್ರಿಯತೆ ತಗ್ಗಿಸಿಕೊಂಡಿದ್ದರೂ, ಈಗಲೂ ಒಂದಿಷ್ಟು ಜನರ ನಿದ್ದೆ ಹಾಳು ಮಾಡುವ ಹಳೆಯ ಚಾರ್ಮ್ ಉಳಿಸಿಕೊಂಡೇ ಇದ್ದಾರೆ. ಇದೀಗ ಮದುವೆ ಎಂದುಕೊಂಡು ಮತ್ತೆ ಸುದ್ದಿ ಮಾಡಿದ್ದಾರೆ.
ದಕ್ಷಿಣ ಭಾರತದ ಹೆಸರಾಂತ ತಾರೆಯಾಗಿರುವ ನಗ್ಮಾ ತಾನು ಮದುವೆಯಾಗುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಆದರೆ ತೆರೆಯ ಹಿಂದಿನಿಂದ ಏನೆನೋ ಸುದ್ದಿಯೂ ಕೇಳಿ ಬರುತ್ತಿದೆ. ಆದರೆ, ನಗ್ಮಾ ಮಾತ್ರ, ಈಗಲೇ ಇವೆಲ್ಲಕ್ಕೂ ಸೊಪ್ಪು ಹಾಕಬೇಡಿ, ನಾನು ಸದ್ಯವೇ ನನ್ನ ಮದುವೆ ಸುದ್ದೀನಾ ನಿಮಗೆ ಕೊಡ್ತೀನಿ ಅನ್ನುವ ಮೂಲಕ ಜನರ ಕುತೂಹಲವನ್ನು ಇನ್ನೊಂದು ಕಡೆ ಸೆಳೆದದ್ದು ಮಾತ್ರ ಸುಳ್ಳಲ್ಲ.
ಕನ್ನಡದಲ್ಲಿ ತುಂಬಾ ಹಿಂದೆ ನಗ್ಮಾ `ಕುರುಬನ ರಾಣಿ'ಯಾಗಿ ಶಿವಣ್ಣನ ಜತೆ ಕುಣಿದಿದ್ದರು. ನಂತರ ರವಿಚಂದ್ರನ್ ಜತೆ ರವಿಮಾಮದಲ್ಲಿ ತುಂಡುಡುಗೆ ತೊಟ್ಟು ಗಮನ ಸೆಳೆದಿದ್ದರು. ಈಗ ಮದುವೆ ಆಗುತ್ತಾರೆ ಎನ್ನುವುದು ಹೊಸದು. ಆಗಲಿ ಬಿಡಿ. ವಯಸ್ಸೇನು ಕಡಿಮೆ ಆಯಿತೇ?