ಕೊನೆಗೂ ಈ ಸಂಜೆ ತೆರೆಕಾಣಲು ಸಜ್ಜಾಗಿದೆ. ಅದಕ್ಕಾಗಿ ಸಂಜನಾಳ ಕಂಗಳೂ ಅರಳಿವೆ. ಅಂದು ಗಂಡ ಹೆಂಡತಿ ಚಿತ್ರದಲ್ಲಿ ಹಸಿ, ಬಿಸಿ ದೃಶ್ಯಗಳಲ್ಲಿ ಬಿಚ್ಚಮ್ಮಳಾಗಿ ಕಾಣಿಸಿಕೊಂಡಿದ್ದ ಚೋರ ಚಿತ್ತ ಚೋರಿ ಸಂಜನಾ ಮತ್ತೆ ತೆರೆಯ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಬಹಳ ಸಮಯದ ನಂತರ ಅಂತೂ ಇಂತೂ ಪ್ರಸವ ಭಾಗ್ಯವನ್ನು ಕಾಣಲು ಹೊರಟಿದೆ ಈ ಸಂಜೆ. ಅದಕ್ಕೇ ಸಂಜನಾಗೆ ಇಷ್ಟೆಲ್ಲಾ ಪುಳಕ. ಅರಳಿದ ಕಣ್ಣುಗಳಲ್ಲಿ ಅದೆಷ್ಟೋ ನಿರೀಕ್ಷೆ ಇಟ್ಟು ಬಿಡುಗಡೆ ದಿನ ಎಣಿಸುತ್ತಿದ್ದಾಳೆ ಸಂಜನಾ.
ತೆಲುಗಿನಲ್ಲಿ ಮೂರು ಚಿತ್ರಗಳಲ್ಲಿ ನಟಿಸಿರುವ ಸಂಜನಾ ಕನ್ನಡದಲ್ಲಿ ಕಾಣಿಸಿದೆ ಬಹಳ ಸಮಯವೇ ಆಗಿ ಹೋಯ್ತು. ಇದೀಗ ಪ್ರೇಮ್ ಜತೆ ನಟಿಸಿರುವ ಈ ಚಿತ್ರವನ್ನು ರವೀಂದ್ರ ಎಂಬುವರು ನಿರ್ದೇಶಿಸಿದ್ದಾರೆ. ಇದೀಗ ಯಾಕೋ ನೀವು ಮುಂಬೈನಲ್ಲೇ ಸೆಟ್ಲಾಗಿ ಬಿಟ್ಟೀದ್ದೀರಂತಲ್ಲಾ ಎಂದು ಆಕೆಗೆ ನೇರಾನೇರ ಪ್ರಶ್ನಿಸಿದರೆ, ಆಕೆ ಮಾತ್ರ, ನಾನಿಲ್ಲೇ ಇದೀನಲ್ಲಾ, ನಿಮ್ಮ ಕಣ್ಣಮುಂದೆ ಅಂತ ಚಟಾಕಿ ಹಾರಿಸುತ್ತಾಳೆ.
ಇಂತಿಪ್ಪ ಸಂಜನಾಗೆ ಒಂದು ಆಸೆ ಇದೆಯಂತೆ. ಅದೇನೆಂದರೆ ಅರುಂದತಿ ಚಿತ್ರದಲ್ಲಿ ಅನುಷ್ಕಾ ಶೆಟ್ಟಿ ಮಾಡಿದಂಥ ಪಾತ್ರವನ್ನು ಮಾಡಬೇಕೆಂಬುದು. ಅಂಥ ಒಂದು ಅವಕಾಶ ಸಿಕ್ಕೇ ಸಿಗುತ್ತೆ ಎಂಬ ವಿಶ್ವಾಸವೂ ಅವರದ್ದು. ಅಬ್ಬಾ ಸಂಜನಾ!