ತೆರೆಯಲ್ಲಿ ರಂಗುರಂಗಿನ ಕಥೆಯನ್ನು ನೋಡಿ ಸಂತಸ ಪಡುವ ಮಂದಿಗೆ ಇಲ್ಲಿ ಅದೇ ಮಂದಿಯ ತೆರೆಯ ಹಿಂದಿನ ಕಥೆಯೊಂದು ಇಲ್ಲಿದೆ. ಇದ್ದ ಸಾಫ್ಟ್‌ವೇರ್ ಎಂಜಿನಿಯರ್ ಕೆಲಸ ಬಿಟ್ಟು ಅಥವಾ ಬಿಡುವು ಮಾಡಿಕೊಂಡು ಸ್ನೇಹಿತರೊಂದಿಗೆ ಚಿತ್ರಕಥೆಯನ್ನು ಸಿದ್ಧಪಡಿಸಿ, ತಾನೇ ನಿರ್ದೇಶನ ಮಾಡಬೇಕೆಂಬ ಹುಮ್ಮಸ್ಸಿನಿಂದ ಗಾಂಧಿನಗರಕ್ಕೆ ಬಂದು ನಿರ್ಮಾಪಕರನ್ನು ಹುಡುಕಾಡಿದವರು ಯಶವಂತ್.
ಇತ್ತೀಚೆಗಷ್ಟೆ ಬಿಡುಗಡೆಗೊಂಡು ವಿಮರ್ಶಕರಿಂದ ಬೆನ್ನುತಟ್ಟಿಸಿಕೊಂಡಿರುವ ಜಸ್ಟ್ ಪಾಸ್ ಹೆಸರಿನ ಚಿತ್ರದಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿರುವ ಇವರು, ಒಮ್ಮೆ ಪೂರ್ಣಪ್ರಮಾಣದ ನಿರ್ದೇಶಕನಾಗಿ ಕೆಲಸ ಮಾಡುವ ಕನಸು ಕಂಡಿದ್ದರು. ಅಂತೆಯೇ ತಮ್ಮ ಕಥೆಯನ್ನು ರಕ್ಷಿತಾರ ಪತಿ ಹಾಗೂ ಜೋಗಿ ಚಿತ್ರ ಖ್ಯಾತಿಯ ಪ್ರೇಮ್ ಬಳಗದ ದಶಾವತಾರ ಚಂದ್ರು ಬಳಿ ನೀಡಿದರಂತೆ. ಕಥೆ ಓದಿದ ಚಂದ್ರು ಇದಕ್ಕೆ ಪ್ರೇಮ್ ಅವರೇ ನಟರಾದರೆ ಸೂಕ್ತ. ಅವರನ್ನೇ ಹಾಕಿಕೊಂಡು ಚಿತ್ರ ಮಾಡೋಣ, ನಾನೆಲ್ಲಾ ಮಾತಾಡ್ತೀನಿ. ನೀವೀಗ ಹೊರಡಿ, ಸಮಯ ಬಂದಾಗ ಹೇಳಿ ಕಳಿಸ್ತೀನಿ ಅಂದ್ರಂತೆ.
ಯಶವಂತ್‌ಗೆ ಸ್ವರ್ಗಕ್ಕೆ ಮೂರೇ ಗೇಣು. ತಮ್ಮ ಕೆಲಸ ಆಯ್ತು ಅಂದುಕೊಂಡು ಹೊರಟು ಹೋಗಿದ್ದಾರೆ. 3, 4 ತಿಂಗಳು ಕಳೆದರೂ ಏನೂ ಸುದ್ದಿ ಇಲ್ಲದ್ದು ಕಂಡಾಗ ಅನುಮಾನಮಗೊಂಡು ವಿಚಾರಿಸಿದರೆ, ದಂಗುಬಡಿಯುವ ಸರದಿ ಯಶಂವತ್‌ದು. ಈ ಚಿತ್ರ ಕೊಟ್ಟು ಹೋಗಿ, ಬೇರೊಬ್ಬರ ಕೈಲಿ ಮಾಡಿಸುತ್ತೇನೆ ಅಂತ ಚಂದ್ರು ಹೇಳಿದರಂತೆ. ಯಶವಂತ್ ಅದನ್ನು ಒಪ್ಪದೇ ಕಥೆಯನ್ನು ಹಿಂಪಡೆದು ಮರಳಿದ್ದಾರೆ. ಇದಿಷ್ಟು ಪ್ರೇಮ್ ನಟಿಸಬೇಕಿದ್ದ ಚಿತ್ರ 'ಡವ್' ಹಿಂದಿನ ಕಿರಿಕ್ ಕಥೆ.