ಯಾಪ್ಪಾ ಶಿವನೇ, ಇದ್ಯಾರಪ್ಪಾ ಇಂಥಾ ಡೈಲಾಗು ಬಿಟ್ಟಿದ್ದು.. ಬಹುಶಃ ಇದ್ಯಾವುದೋ ಚಿತ್ರದ ಡೈಲಾಗ್ ಇರಬೇಕು ಎಂದುಕೊಳ್ಳಬೇಡಿ. ತನ್ನ ಕನಸಿನ ಹುಡುಗನ ಬಗ್ಗೆ ಗ್ಲ್ಯಾಮರ್ ಬೊಂಬೆ ನಿಧಿ ಸುಬ್ಬಯ್ಯ ಆಡುವ ಮಾತು. ತನ್ನ ನಿರೀಕ್ಷೆಗಳೇ ಬೇರೆ. ಇದನ್ನು ಪೂರೈಸುವ ಮಾದರಿಯ ಹುಡುಗ ಸಿಕ್ಕರೆ ತಕ್ಷಣ ಒಪ್ಪಿಕೊಳ್ಳುತ್ತೇನೆ ಎನ್ನುತ್ತಾರೆ ಈ ನಿಧಿ ಸುಬ್ಬಯ್ಯ.
ಇವರು ಅಭಿನಯಿಸಿದ ಬಹುನಿರೀಕ್ಷಿತ ಯೋಗರಾಜ ಭಟ್ಟರ ಪಂಚರಂಗಿ ಚಿತ್ರ ಇದೀಗ ಬಹುತೇಕ ಅರ್ಧದಷ್ಟು ಚಿತ್ರೀಕರಣ ಮುಗಿಸಿದೆ. ನಾಯಿ ಅಂದರೆ ತುಂಬಾ ಇಷ್ಟಪಡುವ ನಿಧಿ ಸುಬ್ಬಯ್ಯ, ತಾವು ಪಂಚರಂಗಿಯಲ್ಲಿ ಅಭಿನಯಿಸಿದ ಪಾತ್ರಕ್ಕೆ ಹೊಂದುವ ರೀತಿಯಲ್ಲೇ ನನ್ನ ವ್ಯಕ್ತಿತ್ವವೂ ಇರೋದ್ರಿಂದ ಪಾತ್ರವನ್ನು ಸಹಜವಾಗಿ ಅಭಿನಯಿಸಿದೆ. ಇದರಿಂದ ಪಾತ್ರಕ್ಕೂ ಇನ್ನಷ್ಟು ಬಲ ಬಂತು ಎನ್ನುತ್ತಾರೆ.
ಚಿತ್ರದ ಅಭಿನಯಕ್ಕೆ ಅಪ್ಪ ಅಮ್ಮ ಒಪ್ಪಿಗೆ ನೀಡಿದ್ದಾರಾ ಅಂತ ಕೇಳಿದರೆ, ಅವರ ಅನುಮತಿ ಇಲ್ಲದೇ ಏನೂ ಮಾಡಲ್ಲ ಅಂತಾರೆ. ಒಟ್ಟಾರೆ ಹುಡುಗನ ಕಥೆ ಏನೇ ಇರಲಿ, ಇವರ ಅಭಿನಯದ 'ಕೃಷ್ಣಾ ನೀ ಲೇಟಾಗಿ ಬಾರೋ' ಚಿತ್ರ ಈ ವಾರ ತೆರೆಕಣುತ್ತಿದೆ.