ಬಸಂತ್ ಕುಮಾರ್ ಪಾಟೀಲ್ ಹಾಗೂ ವೈಶಾಲಿ ಕಾಸರವಳ್ಳಿ ಅವರಿಗೆ ಈಗ ಸಂಭ್ರಮವೋ ಸಂಭ್ರಮ. ಕಾರಣ ಮುತ್ತಿನ ತೋರಣ! ಬಸಂತ್ ಕುಮಾರ್ ನಿರ್ಮಾಣ ಹಾಗೂ ವೈಶಾಲಿ ಕಾಸರವಳ್ಳಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಮುತ್ತಿನ ತೋರಣ ಧಾರಾವಾಹಿ ಯಶಸ್ವೀ 500 ಕಂತುಗಳನ್ನು ಪೂರೈಸಿದೆ.
ಈ ಟಿವಿ ಕನ್ನಡ ವಾಹಿನಿಯಲ್ಲಿ ಮೂಡಿಬರುತ್ತಿರುವ ಮುತ್ತಿನ ತೋರಣ, ಮನೆಮಂದಿಗೆಲ್ಲ ದಿನನಿತ್ಯ ಮನರಂಜನೆಯ ಮಹಾಪೂರವನ್ನೇ ನೀಡುತ್ತಿದೆ. ಜನಮೆಚ್ಚುಗೆಯ ಜೊತೆಗೆ ಗುಣಮಟ್ಟ ಕಾಯ್ದುಕೊಳ್ಳುವಲ್ಲಿ ಅದು ಯಶಸ್ವಿಯಾಗಿದೆ ಎಂದರೆ ತಪ್ಪಲ್ಲ. ಈ ಗೆಲುವಿನಿಂದ ಉಬ್ಬಿ ಹೋಗಿರುವ ವೈಶಾಲಿ, ಇಲ್ಲಿ ನನ್ನ ಶ್ರಮ ಕೇವಲ ಒಂದು ಪರ್ಸೆಂಟ್ ಮಾತ್ರ ಇದೆ. ನನ್ನ ಆರೋಗ್ಯದಲ್ಲಿ ವ್ಯತ್ಯಯ ಕಂಡುಬಂದಾಗ ಇಡೀ ತಂಡ ಬೆನ್ನೆಲುಬಾಗಿ ಸಹಕಾರಿಯಾಯಿತು ಎನ್ನುತ್ತಾರೆ.
ಸಿನಿಮಾರಂಗದಲ್ಲಿ ಮೂವತ್ತು ವರ್ಷ ಸಿಗದ ಗೆಲುವು, ಕಿರುತೆರೆಯಲ್ಲಿ ಐದೇ ವರ್ಷದಲ್ಲಿ ಸಿಕ್ಕಿತು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ ಬಸಂತ್ ಕುಮಾರ್. ಈ ಗೆಲುವಿಗೆ ಪ್ರಮುಖ ಕಾರಣ ಗಿರೀಶ್ ಕಾಸರವಳ್ಳಿ ಹಾಗೂ ವೈಶಾಲಿ ಕಾಸರವಳ್ಳಿ. ಈ ಮಟ್ಟದ ಗುಣಮಟ್ಟ ಕಾಯ್ದುಕೊಳ್ಳುವಲ್ಲಿ ಅವರ ಶ್ರಮ ಹಾಗೂ ಸಪೋರ್ಟ್ ಕಾರಣ ಎನ್ನುತ್ತಾರೆ.